ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮದುವೆ ಬೇಡ, ಮಗು ಬೇಕು: ಪಾಪ್ ಸ್ಟಾರ್ ಶಕೀರಾ (Shakira | Pop star | Waka Waka | Antonio de la Rua)
Bookmark and Share Feedback Print
 
ನಂಗೆ ಬಾಯ್ ಫ್ರೆಂಡ್ ಇದ್ದಾನೆ, ಆದರೆ ಆತನನ್ನು ಮದುವೆಯಾಗುವುದಿಲ್ಲ. ಮಗು ಮಾತ್ರ ಬೇಕು -- ಹೀಗೆಂದು ಹೇಳಿರುವುದು ಜನಪ್ರಿಯ ಪಾಪ್ ಸ್ಟಾರ್ ಶಕೀರಾ. ಮದುವೆ ದಿರಿಸಿನಲ್ಲಿ ಮಿಂಚುವ ಆಸೆ ನನಗಿಲ್ಲ ಎಂದು ಘಂಟಾಘೋಷವಾಗಿ ಹೇಳಿಕೊಂಡಿದ್ದಾಳೆ.
PR

ಫಿಫಾ ವಿಶ್ವಕಪ್‌ನ 'ವಕಾ ವಕಾ' ಮೂಲಕ ಮತ್ತೆ ಸುದ್ದಿಯಲ್ಲಿರುವ ಶಕೀರಾ, ತಾನು ಗೆಳೆಯ ಆಂಟೋನಿಯೋ ಡೇ ಲಾ ರುವಾನನ್ನು ಮದುವೆಯಾಗುವುದಿಲ್ಲ ಎಂದಿದ್ದಾಳೆ.

ಈ ಕುರಿತು ಬಂದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಕೆ, 'ನೋ, ನನಗೆ ಮುಂದೆಂದೂ ಮದುವೆಯಾಗುವ ಯಾವುದೇ ಯೋಚನೆಯಿಲ್ಲ. ಅದಕ್ಕಿಂತ ಯಾರಾದರೂ ಒಬ್ಬರ ಗರ್ಲ್ ಫ್ರೆಂಡ್ ಆಗಿರುವುದು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತದೆ. ಪ್ರಸಕ್ತ ನಾನು ಹೊಂದಿರುವ ಸಂಬಂಧದ ರೀತಿಯೇ ನನಗೆ ಹೆಚ್ಚು ಇಷ್ಟವಾಗಿದೆ' ಎಂದು ಕೂಲಾಗಿ ಹೇಳಿದ್ದಾಳೆ.

ನನಗೆ ಮಕ್ಕಳು ಬೇಕೆಂಬ ಆಸೆಯಿದೆ. ಖಂಡಿತಾ ನನ್ನದೇ ಮಕ್ಕಳಿಗೆ ಜನ್ಮವನ್ನೂ ನೀಡುತ್ತೇನೆ. ಆದರೆ ನನ್ನನ್ನು ಮದುವೆ ದಿರಿಸಿನಲ್ಲಿ ನೀವು ಯಾವುದೇ ಕಾರಣಕ್ಕೂ ನೋಡಲು ಸಾಧ್ಯವಿಲ್ಲ ಎಂದು ಶಕೀರಾ ಸ್ಪಷ್ಟಪಡಿಸಿದ್ದಾಳೆ.

ಕೊಲೊಂಬಿಯನ್ ಹಾಡುಗಾರ್ತಿಯಾಗಿರುವ 33ರ ಶಕೀರಾ, ಅರ್ಜೆಂಟೀನಾದ ಮಾಜಿ ಅಧ್ಯಕ್ಷ ಫೆರ್ನಾಂಡೋ ಡೇ ರಾ ರುವಾ ಅವರ ಪುತ್ರ 37ರ ಆಂಟೋನಿಯೋ ಜತೆ ಕಳೆದ ಎಂಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾಳೆ.

ಒಂಬತ್ತು ವರ್ಷಗಳ ಹಿಂದೆ ಅರ್ಜೆಂಟೀನಾದ ರೆಸ್ಟಾರೆಂಟ್ ಒಂದರಲ್ಲಿ ಆಂಟೋನಿಯೋನನ್ನು ಭೇಟಿಯಾದ ಕ್ಷಣವನ್ನು ಶಕೀರಾ ರೋಚಕವಾಗಿ ವಿವರಿಸಿದ್ದಾಳೆ.

ಆ ಹೊತ್ತಿಗೆ ನಾನು ಅಲ್ಲಿಗೆ ಹೋಗಿದ್ದೆ, ಆತ ಅಲ್ಲಿ ಕುಳಿತಿದ್ದ. ಆ ಪುರುಷ ನನ್ನವನು, ಆತ ನನ್ನ ಜೀವನದಲ್ಲಿರ ಬೇಕಾದವನು ಎಂದುಕೊಂಡೆ. ಆ ರಾತ್ರಿ ನನಗಾತ ಸಿಗುವವರೆಗೆ ಆತನ ಕಡೆ ನಾನು ಕಣ್ಣು ನೆಟ್ಟಿದ್ದೆ. ನಂತರ ಎಲ್ಲವೂ ನಾನಂದುಕೊಂಡ ಹಾಗೆ ನಡೆಯಿತು. ನಿಜಕ್ಕೂ ಆತನನ್ನು ಭೇಟಿ ಮಾಡಿದ ನನ್ನ ದಿನ ಲಾಟರಿಯನ್ನು ಗೆದ್ದ ರಾತ್ರಿಯಂತಾಗಿತ್ತು ಎಂದಿದ್ದಾಳೆ.
ಸಂಬಂಧಿತ ಮಾಹಿತಿ ಹುಡುಕಿ