ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಕ್ರಮ ಸಂಬಂಧ ಶಂಕಿಸಿ ಪತ್ನಿ ಕೊಂದವನಿಗೆ ಜೈಲು (India | Australia | Mohinder Kaur | Sukhmander Singh)
Bookmark and Share Feedback Print
 
ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಸುಳ್ಳು ಆರೋಪವನ್ನು ಹೊರಿಸಿ ಸಾಯುವ ತನಕ ಹೊಡೆದು ಜೈಲು ಸೇರಿದ್ದ ಭಾರತ ಮೂಲದ ವ್ಯಕ್ತಿಯೊಬ್ಬನಿಗೆ ಆಸ್ಟ್ರೇಲಿಯಾ ನ್ಯಾಯಾಲಯವು 17 ವರ್ಷಗಳ ಶಿಕ್ಷೆ ವಿಧಿಸಿದೆ.

ಮೆಲ್ಬೋರ್ನ್‌ನ ಉಪ ನಗರ ನಿಡ್ರೆ ಎಂಬಲ್ಲಿನ ವಾಲೇ ಲೇಕ್ ಬೌಲೆವಾರ್ಡ್‌ನಲ್ಲಿ 2009ರ ಮೇ 7ರಂದು ಸುಖ್ಮಾಂದರ್ ಸಿಂಗ್ ಎಂಬಾತ ನಾಲ್ಕು ಮಕ್ಕಳ ತಾಯಿ ಮೋಹಿಂದರ್ ಕೌರ್ ಎಂಬ ತನ್ನ ಪತ್ನಿಯನ್ನು ಮರದ ಕೊರಡಿನಿಂದ ಹೊಡೆದು ಕೊಂದು ಹಾಕಿದ್ದ.

44ರ ಹರೆಯ ಸಿಂಗ್ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದ್ದು, 17 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

ಹೆತ್ತವರು ಆಗಾಗ ಜಗಳವಾಡುತ್ತಿದ್ದರು ಎಂದು ಸಿಂಗ್ ಪುತ್ರಿ ಸರಬ್ಜಿತ್ ಕೌರ್ ನ್ಯಾಯಾಲಯದಲ್ಲಿ ಹೇಳಿದ್ದಳು. ಸಾಕ್ಷಿಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಟೆರ್ರೆ ಫಾರೆಸ್ಟ್, ಸಿಂಗ್ ಅಪಪ್ರಚಾರ ಮಾಡುತ್ತಾ, ಗಲಾಟೆ ಮಾಡಲು ಪ್ರಚೋದನೆ ನೀಡುತ್ತಿದ್ದ ಎಂದು ಅಭಿಪ್ರಾಯಪಟ್ಟರು.

ನೀನು ಪತ್ನಿಯನ್ನು ಹೊಡೆಯುತ್ತಿರುವ ಹೊತ್ತಿನಲ್ಲಿ ಮಕ್ಕಳು ಅಳುತ್ತಾ ಮನೆಯ ಹೊರಗಡೆ ನಿಂತಿದ್ದರು. ಕಳೆದ ಹಲವು ವರ್ಷಗಳಿಂದ ನಿಮ್ಮ ನಡುವೆ ಘರ್ಷಣೆಗಳು ನಡೆಯುತ್ತಿದ್ದವು, ನೀನು ನಿರಂತರವಾಗಿ ಆಕೆಯನ್ನು ಹಿಂಸಿಸುತ್ತಾ ಬಂದಿದ್ದೆ. ಆಕೆಯನ್ನು ಮನಬಂದಂತೆ ಹೊಡೆಯುತ್ತಿದ್ದುದಲ್ಲದೆ, ಆಕೆಗೆ ನೋವಾಗುವಂತೆ ಸಿಕ್ಕಸಿಕ್ಕ ವಸ್ತುಗಳನ್ನು ಎಸೆಯುತ್ತಿದ್ದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ.

ಪತ್ನಿ ಪರಪುರುಷರ ಜತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಸಿಂಗ್ ಆರೋಪಿಸುತ್ತಾ ಬಂದಿದ್ದ. ಆದರೆ ಮಗಳು ಹೇಳುವ ಪ್ರಕಾರ, ಆಕೆಯ ತಾಯಿ ಯಾರೊಬ್ಬರ ಜತೆ ಮಾತನಾಡಿದರೂ, ಅಕ್ರಮ ಸಂಬಂಧದ ಆರೋಪ ಹೊರಿಸುತ್ತಿದ್ದ ಎಂದು ಸಿಂಗ್ ವಿರುದ್ಧವೇ ಸಾಕ್ಷ್ಯ ಹೇಳಿದ್ದಾಳೆ.

ತಂದೆಯ ವರ್ತನೆಯಿಂದ ಬೇಸತ್ತಿದ್ದ ಸರಬ್ಜಿತ್ 2007ರಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದಳು. ಈ ಹೊತ್ತಿನಲ್ಲಿ ಸಹೋದರ ಮತ್ತು ಸಹೋದರಿ ಭಾರತದಲ್ಲಿದ್ದ ಕಾರಣ ತಾಯಿ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ತಂದೆಯ ಹಿಂಸೆಯಿಂದ ತಾಯಿಯನ್ನು ಮುಕ್ತಿಗೊಳಿಸಬೇಕೆಂಬ ನಿಟ್ಟಿನಲ್ಲಿ ಸರಬ್ಜಿತ್ ಅವರನ್ನು ಆಸ್ಟ್ರೇಲಿಯಾಕ್ಕೆ ಕರೆಸಿಕೊಂಡಿದ್ದಳು.

ಸ್ವಲ್ಪ ಸಮಯದ ಬಳಿಕ ತಂದೆಯೂ ಕುಡಿತ ಬಿಡುತ್ತೇನೆ ಎಂಬ ಭರವಸೆ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ಬಂದಿದ್ದ. ಆದರೆ ಮತ್ತೆ ಕುಡಿತ ಆರಂಭಿಸಿ ಹಿಂಸೆ ನೀಡಲು ಆರಂಭಿಸಿದ್ದ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ