ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತಾಲಿಬಾನ್ ಮುಖಂಡರ ಗಡೀಪಾರಿಗೆ ಪಾಕಿಸ್ತಾನ ಚಿಂತನೆ (Pakistan | Mullah Baradar | Afghan militant | Taliban)
Bookmark and Share Feedback Print
 
ತಾಲಿಬಾನ್ ಜತೆ ಸಂಧಾನಕ್ಕೆ ಯತ್ನಿಸುತ್ತಿರುವ ಅಫಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ‌ಗೆ ಸಹಕಾರ ನೀಡುವ ನಿಟ್ಟಿನಲ್ಲಿ ಮುಲ್ಲಾ ಬರದಾರ್ ಸೇರಿದಂತೆ ಉನ್ನತ ಅಫ್ಘಾನ್ ಭಯೋತ್ಪಾದಕ ಕಮಾಂಡರುಗಳನ್ನು ಪಾಕಿಸ್ತಾನ ಗಡೀಪಾರು ಮಾಡುವ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ.

ಮುಲ್ಲಾ ಬರದಾರ್ ಗಡೀಪಾರಿಗೆ ಸಂಬಂಧಪಟ್ಟಂತೆ ನಾವು ಅಫಘಾನಿಸ್ತಾನ ಸರಕಾರದ ಜತೆ ಪರಸ್ಪರ ಸ್ವೀಕಾರಾರ್ಹ ಒಪ್ಪಂದವೊಂದಕ್ಕೆ ಬರುವ ಕುರಿತು ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಭದ್ರತಾ ಅಧಿಕಾರಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಿ 'ಡಾನ್' ಪತ್ರಿಕೆ ವರದಿ ಮಾಡಿದೆ.

ಇದೇ ವರ್ಷದ ಆರಂಭದಲ್ಲಿ ಪಾಕಿಸ್ತಾನವು ಬಂಧಿಸಿರುವ ಬರದಾರ್ ಮತ್ತು ಇತರ ತಾಲಿಬಾನ್ ಕಮಾಂಡರುಗಳನ್ನು ಗಡೀಪಾರು ಮಾಡುವ ಬಗ್ಗೆ ಇತ್ತೀಚೆಗಷ್ಟೇ ಅಫಘಾನಿಸ್ತಾನವು ಮಾತುಕತೆ ನಡೆಸಿತ್ತು.

ಈ ಹಿಂದೆ ಕಾಬೂಲ್‌ನಿಂದ ಗಡೀಪಾರು ಪ್ರಸ್ತಾಪ ಬಂದಾಗಲೆಲ್ಲ ಪಾಕಿಸ್ತಾನವು ತಳ್ಳಿ ಹಾಕುತ್ತಾ ಬಂದಿತ್ತು. ಆದರೆ ಇತ್ತೀಚೆಗಷ್ಟೇ ಮಾಡಿರುವ ಮನವಿಗೆ ಪೂರಕವಾಗಿ ಸ್ಪಂದಿಸುವ ಸಾಧ್ಯತೆಗಳಿವೆ. ಇದಕ್ಕಿರುವ ಕಾರಣ ಅಫಘಾನಿಸ್ತಾನದ ಮರು ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದೇನೆ ಎಂಬುದನ್ನು ತೋರಿಸಿಕೊಳ್ಳುವುದು ಮತ್ತು ಆ ದೇಶದ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸುವುದು ಎಂದು ಹೇಳಲಾಗಿದೆ.

ಪ್ರಸಕ್ತ ಪರಿಸ್ಥಿತಿಯಲ್ಲಿ ಬರದಾರ್ ಗಡೀಪಾರಿಗೆ ಯಾವುದೇ ಕಾನೂನಿನ ತೊಡಕಿಲ್ಲ. ಈ ಸಂಬಂಧ ಇತ್ತೀಚೆಗಷ್ಟೇ ಪ್ರಶ್ನಿಸಿದ್ದ ಮನವಿಯೊಂದನ್ನು ಲಾಹೋರ್ ಹೈಕೋರ್ಟ್ ಕಳೆದ ತಿಂಗಳು ವಜಾಗೊಳಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ