ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಂಬೋಡಿಯಾ ಪ್ರಧಾನಿ, ಸಚಿವರಿಗೆ ಎಚ್1ಎನ್1 ಸೋಂಕು! (Cambodia | Hun Sen | H1N1 influenza | Health Minister | swine flu)
Bookmark and Share Feedback Print
 
ಜಗತ್ತಿನಾದ್ಯಂತ ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದ್ದ ಎಚ್1ಎನ್1 ಇದೀಗ ಮತ್ತೆ ಸುದ್ದಿ ಮಾಡಿದೆ. ಕಾಂಬೋಡಿಯಾದ ಪ್ರಧಾನಿ ಹುನ್ ಸೆನ್ ಮತ್ತು ಮೂರು ಮಂದಿ ಸಚಿವರಲ್ಲಿ ಎಚ್1ಎನ್1 ಸೋಂಕು ಪತ್ತೆಯಾಗಿರುವುದಾಗಿ ಕಾಂಬೋಡಿಯಾದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಮಾಮ್ ಬುನ್‌ಹೆಂಗ್ ಅವರು ಪ್ರಕಟಣೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದು, ದೇಶದ ಪ್ರಧಾನಿ ಸೆನ್ ಅವರು ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದು, ಕಳೆದ ಶುಕ್ರವಾರ ಎಚ್1ಎನ್1 ವೈರಸ್ ಪತ್ತೆಯಾಗಿರುವುದಾಗಿ ಹೇಳಿದ್ದಾರೆ.

ಆದರೆ ಪ್ರಧಾನಿ ಸೆನ್‌ಗೆ ವಾರಗಳ ಕಾಲ ನೀಡಿದ ಚಿಕಿತ್ಸೆಯ ನಂತರ ಅವರ ಆರೋಗ್ಯ ಸುಧಾರಣೆಯಲ್ಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಅಲ್ಲದೇ ಉಪ ಪ್ರಧಾನಿ ಯಿಮ್ ಚ್ಚಾಯ್ ಲೈ, ಹಿರಿಯ ಸಚಿವ ಚ್ಚಾಯ್ ಥಾನ್ ಮತ್ತು ತಾವೋ ಸೆಂಗ್‌ಹವರ್ ಅವರಲ್ಲಿಯೂ ಎಚ್1ಎನ್1 ಸೋಂಕು ಪತ್ತೆಯಾಗಿರುವುದಾಗಿ ವಿವರಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಸೋಂಕು ತಡೆಗಾಗಿ ಆರೋಗ್ಯ ಸಚಿವಾಲಯ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದಾಗಿಯೂ ಆರೋಗ್ಯ ಸಚಿವಾಲಯದ ಲೈ ಸೋವಾನ್ನಾ ಹೇಳಿದ್ದಾರೆ. ಕಾಂಬೋಡಿಯಾದಲ್ಲಿ ಈಗಾಗಲೇ 591ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದು, ಆರು ಮಂದಿ ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ