ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಿಕ್ಕಟ್ಟು ಅಂತ್ಯ: ಕೊನೆಗೂ ನೇಪಾಳ ಪ್ರಧಾನಿ ರಾಜೀನಾಮೆ (Nepal | Madhav Kumar Nepal | Maoist party | Pushpa Kamal Dahal Prachanda)
Bookmark and Share Feedback Print
 
ಅಂತೂ ಕೊನೆಗೂ ನೇಪಾಳ ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ಬುಧವಾರ ರಾಜೀನಾಮೆ ಘೋಷಿಸುವ ಮೂಲಕ ದೇಶದಲ್ಲಿ ತಲೆದೋರಿದ್ದ ದೀರ್ಘಕಾಲಾವಧಿಯ ರಾಜಕೀಯ ಬಿಕ್ಕಟ್ಟು ಅಂತ್ಯಗೊಂಡಂತಾಗಿದೆ.

ಇಂದು ಟೆಲಿವಿಷನ್ ಮುಖೇನ ಮಾತನಾಡುತ್ತ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದರು. ನೇಪಾಳದ ವಿರೋಧ ಪಕ್ಷವಾದ ಮಾವೋ ಪಕ್ಷದ ಒತ್ತಡಕ್ಕೆ ಮಣಿದಿರುವ ಮಾಧವ್ ಕುಮಾರ್ ಪ್ರಧಾನಿ ಗದ್ದುಗೆಯಿಂದ ಕೆಳಗಿಳಿದಿದ್ದಾರೆ.

'ರಾಜಕೀಯ ಬಿಕ್ಕಟ್ಟು ಪರಿಹಾರಕ್ಕಾಗಿ ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ' ಮಾಧವ್ ಕುಮಾರ್, ಆ ನಿಟ್ಟಿನಲ್ಲಿ ಶಾಂತಿ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಅಲ್ಲದೇ ನೂತನ ಸಂವಿಧಾನ ರಚನೆಗೆ ಅವಕಾಶವಾಗಿದ್ದು, ಸದ್ಯದ ರಾಜಕೀಯ ಅಸ್ಥಿರತೆ ಕೊನೆಗೊಂಡಂತಾಗಿದೆ ಎಂದರು.

ರಾಜಪ್ರಭುತ್ವ ಅಂತ್ಯಗೊಂಡು 2008ರಲ್ಲಿ ನೇಪಾಳ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಘೋಷಣೆಯಾದ ನಂತರದ ಎರಡನೇ ಮೈತ್ರಿಕೂಟದ ಸರ್ಕಾರ ಇದಾಗಿದೆ. ಮೊದಲು ನೇಪಾಳದ ಮಾವೋವಾದಿ ನಾಯಕ ಪ್ರಚಂಡ ಅವರ ನೇತೃತ್ವದ ಮೈತ್ರಿಕೂಟದ ಸರ್ಕಾರ ರಚನೆಯಾಗಿತ್ತು. ಪ್ರಚಂಡ ಪ್ರಧಾನಿ ಗದ್ದುಗೆ ಏರಿದ್ದರು. ಆದರೆ ಕೇವಲ ಒಂಬತ್ತು ತಿಂಗಳ ಪ್ರಚಂಡ ನೇತೃತ್ವದ ಸರ್ಕಾರ ರಾಜಕೀಯ ಬಿಕ್ಕಟ್ಟಿನಿಂದ 2009ರ ಮೇ ತಿಂಗಳಿನಲ್ಲಿ ಪ್ರಚಂಡ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಮಾಧವ್ ಕುಮಾರ್ ಪ್ರಧಾನಿಯಾಗುವ ಮೂಲಕ ಎರಡನೇ ಮೈತ್ರಿಕೂಟದ ಸರ್ಕಾರ ಗದ್ದುಗೆ ಏರಿತ್ತು.

ಆದರೆ ನೂತನ ಸಂವಿಧಾನ ರಚನೆಗೆ ಪಟ್ಟು ಹಿಡಿದಿದ್ದ ಮಾವೋ ಪಕ್ಷ ಕಳೆದ ವರ್ಷ ಮೇ ತಿಂಗಳಿನಲ್ಲಿಯೇ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರತಿಭಟನೆ ನಡೆಸಿತ್ತು. ಆ ನೆಲೆಯಲ್ಲಿ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿತ್ತು. ಪ್ರಧಾನಿ ಮಾಧವ್ ಕುಮಾರ್ ನೇಪಾಳ್ ರಾಜೀನಾಮೆ ನೀಡಿದ ನಂತರವೇ ಮುಂದಿನ ಕಾರ್ಯ ಎಂದು ಮಾವೋ ಪಕ್ಷ ಪಟ್ಟು ಹಿಡಿದಿತ್ತು.

ಇದೀಗ ಕೊನೆಗೂ ಮಾಧವ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ನೇಪಾಳ ಸರ್ಕಾರದ ಗದ್ದುಗೆ ಏರಿದ್ದ ಕಮ್ಯೂನಿಷ್ಟ್ ಪಾರ್ಟ್ ಆಫ್ ನೇಪಾಳ್(ಯುಎಂಎಲ್)ನ ಮಾಜಿ ಮುಖಂಡರಲ್ಲಿ ನೂತನ ಪ್ರಧಾನಿ ಆಯ್ಕೆ ಮಾಡುವಂತೆ ನೇಪಾಳ ಅಧ್ಯಕ್ಷರು ಸೂಚನೆ ನೀಡಲಿದ್ದಾರೆಂದು ಮೂಲವೊಂದು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ