ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಿಂದೂ ದೇವರಿಗೆ ಅವಮಾನ: ಕ್ಷಮೆಯಾಚಿಸಿದ ಶೂ ಕಂಪನಿ (American company | Hindu deities | Shoes | apologise)
Bookmark and Share Feedback Print
 
ಶೂನಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಚಿತ್ರಿಸಿದ್ದಕ್ಕೆ ಭಾರತೀಯ ಸಮುದಾಯದಿಂದ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾದ ನಂತರ ಕೊನೆಗೂ ಅಮೆರಿಕ ಮೂಲದ ಶೂ ಕಂಪನಿ ಶೂಗಳನ್ನು ಮಾರಾಟ ಮಾಡದೆ ಮಾರುಕಟ್ಟೆಯಿಂದ ವಾಪಸ್ ಪಡೆದಿದೆ.

ಶೂನಲ್ಲಿ ಹಿಂದೂ ದೇವರ ಚಿತ್ರಗಳನ್ನು ಚಿತ್ರಿಸಿದ್ದಕ್ಕೆ ಹಿಂದೂ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ಕ್ಷಮೆಯಾಚಿಸಿದ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ವಿಶೇಷ ಡಿಸೈನ್‌ನ ಶೂಗಳನ್ನು ವಾಪಸ್ ಪಡೆದಿರುವುದಾಗಿ ಅಮೆರಿಕನ್ ಶೂ ಕಂಪೆನಿ ತಿಳಿಸಿದೆ.

ಅಮೆರಿಕನ್ ಕಂಪನಿ ಗಿಟಾರ್ ದಂತಕಥೆ ದಿವಂಗತ ಜಿಮಿ ಹೆಂಡ್ರಿಕ್ಸ್ ಹೆಸರಿನಲ್ಲಿ ಶೂ ಅನ್ನು ಹಿಂದೂ ದೇವರ ಚಿತ್ರಗಳನ್ನು ಚಿತ್ರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. 'ಹಿಂದೂ ಸಮುದಾಯದವರಲ್ಲಿ ನಾವು ಕ್ಷಮೆಯಾಚಿಸುತ್ತೇವೆ. ಇದು ಉದ್ದೇಶಪೂರ್ವಕವಾಗಿ ನಡೆದ ಅಪರಾಧವಲ್ಲ ಎಂದು ಶೂ ಕಂಪನಿಯ ವಕ್ತಾರೆ ಜೆಸ್ಸಿಕಾ ಹೇಳಿದ್ದಾರೆ.

ಹಿಂದೂ ದೇವ-ದೇವತೆಗಳ ಚಿತ್ರ ಹೊಂದಿದ್ದ ಶೂ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ನಂತರ ಹೂಸ್ಟನ್ ಮೂಲದ ಮಹಿಳೆ ಬೆಥ್ ಕುಲಕರ್ಣಿ ಇದರ ವಿರುದ್ಧ ಧ್ವನಿ ಎತ್ತಿದ್ದರು. ನಂತರ ಹಿಂದೂ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ಶೂ ಕಂಪನಿ ಇ-ಮೇಲ್ ಮೂಲಕ ಕ್ಷಮಾಪಣೆಯನ್ನು ರವಾನಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ