ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ ಖಾಯಿದಾ ಮ್ಯಾಗಜಿನ್‌ನಲ್ಲಿ 'ಜಿಹಾದ್ ಟಿಪ್ಸ್'! (Al Qaeda | magazine | Americans | Allah | Osama bin Laden,)
Bookmark and Share Feedback Print
 
'ಅಲ್ಲಾಹ್ ಹೆಸರಿನಲ್ಲಿ ಅಮೆರಿಕನ್‌ರು ಮತ್ತು ಪಾಶ್ಚಾತ್ಯರನ್ನು ಹೇಗೆ ಕೊಲ್ಲಬಹುದು' ಎಂಬ ಬಗ್ಗೆ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಭಯೋತ್ಪಾದನೆ ಟಿಪ್ಸ್ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ನಿರಂತರವಾಗಿ ಲೇಖನಗಳ ಸರಣಿಯನ್ನು ಪ್ರಕಟಿಸತೊಡಗಿದೆ.

ಸುಮಾರು 74ಪುಟಗಳ ಇಂಗ್ಲಿಷ್ ಭಾಷೆಯ ಆನ್‌ಲೈನ್ ಮ್ಯಾಗಜಿನ್, ಭಯೋತ್ಪಾದನೆ ಸಂಬಂಧಿ ಟಿಪ್ಸ್ ಅನ್ನು ನೀಡಿದೆ. ವೈಯಕ್ತಿಕ ಜಿಹಾದ್‌ ಮೂಲಕ ಅಮೆರಿಕನ್, ಪಾಶ್ಚಾತ್ಯ ಪ್ರಜೆಗಳನ್ನು ಹೇಗೆ ಕೊಲ್ಲಬಹುದು ಎಂಬುದನ್ನು ಲೇಖನದಲ್ಲಿ ವಿವರಿಸಲಾಗಿದೆ.

ಪ್ರಸ್ತುತ ಯೆಮೆನ್‌ನಲ್ಲಿ ವಾಸ್ತವ್ಯ ಹೂಡಿರುವ ಅಮೆರಿಕನ್ ಪ್ರಜೆ ಸಮಿರ್ ಖಾನ್ ಈ ಮ್ಯಾಗಜಿನ್ ರೂವಾರಿ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಅರೆಬಿಯನ್ ಪ್ರಾಂತ್ಯದ ಅಲ್ ಖಾಯಿದಾ ಘಟಕ ಈ ಮ್ಯಾಗಜಿನ್ ಅನ್ನು ಪ್ರಕಟಿಸುತ್ತಿದೆ. ಜಿಹಾದ್ ಹೋರಾಟಕ್ಕಾಗಿ ವಿದೇಶಿ ಯುವಕರನ್ನು ಸೆಳೆಯಲು ಮತ್ತು ಭೀಕರ ದಾಳಿ ನಡೆಸಲು ಪ್ರಭಾವಿತಗೊಳಿಸುವ ಗುರಿಯೊಂದಿಗೆ ಮ್ಯಾಗಜಿನ್ ಪ್ರಕಟಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಹಾದ್ ಹೋರಾಟದಲ್ಲಿ ಯಾವ ರೀತಿಯಲ್ಲಿ ಮುನ್ನುಗ್ಗಬೇಕು, ದುಷ್ಕೃತ್ಯಗಳನ್ನು ನಡೆಸುವ ಬಗ್ಗೆ ಹಾಗೂ ಹತ್ಯೆ ಮಾಡುವ ಬಗ್ಗೆ ಅಲ್ ಖಾಯಿದಾ ಲೇಖನದಲ್ಲಿ ವಿವರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ