ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಸೂಫಿ ದರ್ಗಾ ಮೇಲೆ ಬಾಂಬ್ ದಾಳಿಗೆ ಐವರು ಬಲಿ (Pakistan | Sufi shrine | bomb, Multan | Islamist militants)
Bookmark and Share Feedback Print
 
ಪಾಕಿಸ್ತಾನ ನಗರದಲ್ಲಿನ ಪ್ರಸಿದ್ಧ ಸೂಫಿ ದರ್ಗಾ ಗೇಟ್ ಬಳಿ ಬಾಂಬ್ ಅಳವಡಿಸಿ ಇಟ್ಟಿದ್ದ ಮೋಟಾರ್ ಸೈಕಲ್ ಸ್ಫೋಟಿಸಿದ ಪರಿಣಾಮ ಪ್ರಾರ್ಥನೆಗೆ ಆಗಮಿಸಿದ್ದ ಐದು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಫಾರಿದ್ ಶಾಕಾರ್ ಗಂಜ್ ದರ್ಗಾದ ಬಳಿ ಬಾಂಬ್ ಸ್ಫೋಟದ ಘಟನೆ ನಡೆದಿದೆ. ಪಾಕಿಸ್ತಾನದಲ್ಲಿನ ಸೂಫಿ ದರ್ಗಾಗಳನ್ನು ಗುರಿಯಾಗಿರಿಸಿ ನಡೆಸಿದ ಸ್ಫೋಟ ಹೊಸ ಬೆಳವಣಿಗೆಯಾಗಿದೆ. ಕಟ್ಟಾ ಮುಸ್ಲಿಮ್ ಮತ್ತು ಸೂಫಿ ಪಂಗಡದ ನಡುವಿನ ಘರ್ಷಣೆಯೇ ಸ್ಫೋಟಕ್ಕೆ ಕಾರಣಕ್ಕೆ ಎನ್ನಲಾಗಿದೆ.

ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಮಹಿಳೆಯೊಬ್ಬರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಸರಕಾರದ ಹಿರಿಯ ಅಧಿಕಾರಿ ಮಹೆರ್ ಅಸ್ಲಾಮ್ ಹಾಯತ್ ತಿಳಿಸಿದ್ದಾರೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

ಬಾಂಬ್ ಸ್ಫೋಟದಿಂದಾಗಿ ದರ್ಗಾದ ಹೊರಭಾಗದಲ್ಲಿದ್ದ ಹಲವು ಅಂಗಡಿಗಳಿಗೂ ಹಾನಿಯಾಗಿದೆ. ಆದರೆ 12ನೇ ಶತಮಾನದಲ್ಲಿ ಕಟ್ಟಲ್ಪಟ್ಟ ಸೂಫಿ ದರ್ಗಾಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹಾಯತ್ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ