ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನೀವು ಕೊಂದರೆ, ನಾವೂ ನಿಮ್ಮನ್ನು ಕೊಲ್ತೇವೆ: ಫ್ರಾನ್ಸ್‌ಗೆ ಒಸಾಮಾ (Osama bin Laden | Al-Qaida | Afghanistan | French nationals kills)
Bookmark and Share Feedback Print
 
ಅಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಮೆರಿಕ ನೇತೃತ್ವದ ಪಡೆಗೆ ಬೆಂಬಲ ನೀಡಿರುವ ಹಾಗೂ ಮುಸ್ಲಿಮ್ ಮಹಿಳೆಯರ ಬುರ್ಖಾ ನಿಷೇಧದ ಕಾನೂನು ಜಾರಿಗೆ ತಂದಿರುವುದಕ್ಕೆ ಪ್ರತೀಕಾರವಾಗಿ ಫ್ರಾನ್ಸ್‌ನ ಪ್ರಜೆಗಳನ್ನು ಹತ್ಯೆಗೈಯುವುದಾಗಿ ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಬಿಡುಗಡೆಗೊಳಿಸಿರುವ ನೂತನ ಆಡಿಯೋ ಟೇಪ್‌ನಲ್ಲಿ ಬೆದರಿಕೆ ಹಾಕಿದ್ದಾನೆ.

ಒಸಾಮಾ ಬಿನ್ ಲಾಡೆನ್ ಎಚ್ಚರಿಕೆ ನೀಡಿರುವ ನೂತನ ಆಡಿಯೋ ಟೇಪ್ ಸಂದೇಶವನ್ನು ಸೆಟಲೈಟ್ ಟಿವಿ ಸ್ಟೇಶನ್ ಅಲ್ ಜಾಜೀರಾ ಪ್ರಸಾರ ಮಾಡಿದೆ. ಅಲ್ಲದೇ ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಸಮರದಲ್ಲಿ ಮುಸ್ಲಿಮ್ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲಲು ಅಫ್ಘಾನಿಸ್ತಾನ ಬೆಂಬಲ ನೀಡುತ್ತಿದ್ದು ಅದಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಒಸಾಮಾ ಗುಡುಗಿದ್ದಾನೆ. ಅದಕ್ಕಾಗಿಯೇ ಫ್ರಾನ್ಸ್ ಮುಸ್ಲಿಮರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಗೆ ತಿರುಗೇಟು ನೀಡಲು ಕಳೆದ ತಿಂಗಳು ಆಫ್ರಿಕಾದ ನಿಗೆರಾದಿಂದ ಐದು ಮಂದಿ ಫ್ರಾನ್ಸ್ ಪ್ರಜೆಗಳನ್ನು ಅಪಹರಿಸಲಾಗಿದೆ ಎಂದು ಒಸಾಮಾ ತಿಳಿಸಿದ್ದಾನೆ.

'ಇದೊಂದು ತುಂಬಾ ಸರಳ ಹಾಗೂ ಸ್ಪಷ್ಟವಾದ ಸಮೀಕರಣ, ಯಾಕೆಂದರೆ ನೀವು ಕೊಂದರೆ, ನಿಮ್ಮವರನ್ನು ನಾವು ಕೊಲ್ಲುತ್ತೇವೆ. ನೀವು ಹಿಡಿದರೆ, ನಾವು ನಿಮ್ಮವರನ್ನು ಹಿಡಿಯುತ್ತೇವೆ. ನೀವು ನಮ್ಮ ಭದ್ರತೆಗೆ ಬೆದರಿಕೆ ಹಾಕಿದರೆ, ನಾವು ನಿಮ್ಮ ಭದ್ರತೆಗೆ ಬೆದರಿಕೆಯೊಡ್ಡುತ್ತೇವೆ' ಎಂದು ಒಸಾಮಾ ಫ್ರಾನ್ಸ್‌ಗೆ ಎಚ್ಚರಿಕೆ ನೀಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ