ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ಗುರುದ್ವಾರಕ್ಕೆ ಭೇಟಿ ಕೊಡಿ: ಬರಾಕ್‌ಗೆ ಸಿಖ್‌ ಸಮುದಾಯ (Pakistan | Barack Obama | gurudwara | Sikh community | Golden Temple)
Bookmark and Share Feedback Print
 
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತಕ್ಕೆ ಮುಂದಿನ ತಿಂಗಳು ಆಗಮಿಸುತ್ತಿರುವ ಸಂದರ್ಭದಲ್ಲಿ ಸಿಖ್‌ರ ಪವಿತ್ರ ಧಾರ್ಮಿಕ ಕೇಂದ್ರ ಅಮೃತ್‌ಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುವುದಿಲ್ಲ ಎಂಬ ಹೇಳಿಕೆ ಸಿಖ್ ಸಮುದಾಯಕ್ಕೆ ನಿರಾಸೆ ತಂದಿದೆ. ಆದರೂ 2011ರಲ್ಲಿ ಪಾಕಿಸ್ತಾನಕ್ಕೆ ಬರಾಕ್ ಭೇಟಿ ನೀಡಿದಾಗ ಅಲ್ಲಿನ ಗುರುದ್ವಾರಕ್ಕೆ ಹೋಗುವಂತೆ ಅಮೆರಿಕದಲ್ಲಿರುವ ಸಿಖ್ ಸಮುದಾಯ ಮನವಿ ಮಾಡಿಕೊಂಡಿದೆ.

ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ವರ್ಷ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆಂದು ಶ್ವೇತಭವನದ ಮೂಲಗಳು ಖಚಿತಪಡಿಸಿವೆ. ಆ ನಿಟ್ಟಿನಲ್ಲಿ ಬರಾಕ್ ಅವರು ಆ ಸಂದರ್ಭದಲ್ಲಿ ಸಿಖ್ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಅಮೆರಿಕ ಮೂಲದ ಸಿಖ್ ಸಂಘಟನೆ ಹೇಳಿಕೆಯಲ್ಲಿ ತಿಳಿಸಿದೆ.

ನವೆಂಬರ್ ತಿಂಗಳಿನಲ್ಲಿ ಬರಾಕ್ ಭಾರತಕ್ಕೆ ಆಗಮಿಸುವ ವೇಳೆ ಅಮೃತ್‌ಸರದಲ್ಲಿರುವ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುವುದಿಲ್ಲ ಎಂಬ ಅಂಶ ಸಿಖ್‌ ಸಮುದಾಯಕ್ಕೆ ತೀವ್ರ ನಿರಾಸೆಯನ್ನು ಉಂಟು ಮಾಡಿದೆ. ಬರಾಕ್ ಅವರ ಈ ನಿರ್ಧಾರ ತಮಗೆ ತುಂಬಾ ನೋವು ತಂದಿದೆ ಎಂದು ಸಿಖ್ ಮುಖಂಡರು ತಿಳಿಸಿದ್ದಾರೆ.

ಬರಾಕ್ ಅವರು ನವೆಂಬರ್ 6ರಿಂದ 9ರವರೆಗೆ ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬರಾಕ್ ಅವರು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಾರೆಂಬ ಊಹಾಪೋಹ ಹಬ್ಬಿತ್ತು. ಕೊನೆಗೆ ಅಮೆರಿಕದ ಶ್ವೇತಭವನವೇ ಬರಾಕ್ ಅಮೃತ್‌ಸರಕ್ಕೆ ಭೇಟಿ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ