ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾಜಿ ಗೆರಿಲ್ಲಾ ಯೋಧೆ ಬ್ರೆಜಿಲ್‌ನ ಪ್ರಥಮ ಮಹಿಳಾ ಅಧ್ಯಕ್ಷೆ (female President | female President | Latin America | be Brazil's)
Bookmark and Share Feedback Print
 
ಮಾಜಿ ಗೆರಿಲ್ಲಾ ಯೋಧೆ, ಬ್ರೆಜಿಲ್‌ನ ಸರ್ವಾಧಿಕಾರಿಯಾಗಿದ್ದಾಕೆ ಇದೀಗ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಈಕೆ ದೇಶದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆಡಳಿತಾರೂಢ ಪಕ್ಷದ ಅಭ್ಯರ್ಥಿ ಡಿಲ್ಮಾ ರೌಸ್ಸೆಫ್ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾಗಿರುವುದಾಗಿ ಸುಪ್ರೀಂ ಚುನಾವಣಾ ಇಲಾಖೆ ತಿಳಿಸಿದ್ದು, ಡಿಲ್ಮಾ ಜನವರಿ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದೆ.

ಶೇ.99ರಷ್ಟು ಮತಎಣಿಕೆ ಪೂರ್ಣಗೊಂಡಿದ್ದು, ರೌಸ್ಸೆಫ್ 55.6ರಷ್ಟು ಮತಗಳಿದ್ದಾರೆ. ಅವರ ಸಮೀಪದ ಪ್ರತಿಸ್ಪರ್ಧಿ ಜೋಸೆ ಸೆರ್ರಾ 44.4ರಷ್ಟು ಮತ ಪಡೆದಿರುವುದಾಗಿ ಇಲೆಕ್ಟ್ರೋರಾಲ್ ಕೋರ್ಟ್ ವಿವರಿಸಿದೆ.

ನಿಜಕ್ಕೂ ಈ ಸಂದರ್ಭದಲ್ಲಿ ನನಗೆ ಸಂತೋಷವಾಗಿದೆ. ಆ ನಿಟ್ಟಿನಲ್ಲಿ ನಾನು ಬ್ರಿಜಿಲ್ ಜನತೆಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿಲ್ಮಾ ತಿಳಿಸಿದ್ದಾರೆ. ಅಲ್ಲದೇ ತಾನು ಜನರ ನಿರೀಕ್ಷೆಯನ್ನು ಹುಸಿಗೊಳಿಸಲಾರೆ ಎಂದು ಭರವಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ