ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್: ಕಾರ್ ಬಾಂಬ್ ಸ್ಫೋಟಕ್ಕೆ 48 ಬಲಿ (Iraq car bombing | bomb exploded | Karbala | police)
Bookmark and Share Feedback Print
 
ಸೆಂಟ್ರಲ್ ಇರಾಕ್‌ನ ಕರ್ಬಾಲಾ ನಗರದ ಜನನಿಭಿಡ ರಸ್ತೆ ಸಮೀಪದ ಮಸೀದಿ ಬಳಿ ಕಾರ್ ಬಾಂಬ್‌ವೊಂದು ಸ್ಫೋಟಿಸಿದ ಪರಿಣಾಮ 48 ಮಂದಿ ಬಲಿಯಾಗಿದ್ದು, 16 ಜನರು ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ಬಾಲಾದ ಇಮಾಮ್ ಅಬ್ಬಾಸ್ ಮಸೀದಿ ಸಮೀಪದ ಬಾಬ್ ಟೌರಾದ್ ಬೀದಿಯಲ್ಲಿ ಕಾರ್ ಬಾಂಬ್ ಸ್ಫೋಟಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ನಂತರ ಪೊಲೀಸರು ಷಿಯಾಗಳ ಪವಿತ್ರ ನಗರವಾದ ಕರ್ಬಾಲಾದಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದಾರೆ.

ಇದೀಗ ಕರ್ಬಾಲಾದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ