ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಕ್ರಿಶ್ಚಿಯನ್ ಮಹಿಳೆ ಗಲ್ಲುಶಿಕ್ಷೆಗೆ ಜರ್ದಾರಿ ತಡೆ (Christian woman | Pakistan | Asif Ali Zardari | stays execution)
Bookmark and Share Feedback Print
 
ಧರ್ಮನಿಂದನೆ ಆರೋಪದಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್ ಮಹಿಳೆಯ ಗಲ್ಲುಶಿಕ್ಷೆ ಜಾರಿಗೆ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಶುಕ್ರವಾರ ತಡೆಯಾಜ್ಞೆ ನೀಡಿದ್ದಾರೆ.

ಧರ್ಮನಿಂದನೆ ಆರೋಪದಲ್ಲಿ ಆಸಿಯಾ ಬೀಬಿ ಎಂಬಾಕೆಗೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ನಾನ್‌ಕಾನಾ ಸಾಹಿಬ್ ಅವರು, ಪಾಕಿಸ್ತಾನ ದಂಡ ಸಂಹಿತೆ ಅನ್ವಯ ಮರಣದಂಡನೆ ಶಿಕ್ಷೆ ವಿಧಿಸಿದ್ದರು.

ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಆಸಿಯಾ ಬೀಬಿ ವಿರುದ್ಧ ಇಲ್ಲಿನ ಸ್ಥಳೀಯ ಮಸೀದಿ ಮುಖಂಡ ಖ್ವಾರಿ ಸಲೀಂ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಗಲ್ಲುಶಿಕ್ಷೆ ನೀಡಿ, 300,000 ರೂ.ದಂಡ ವಿಧಿಸಿತ್ತು.

ಧರ್ಮನಿಂದನೆ ಆರೋಪದಡಿಯಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಕ್ರಿಶ್ಚಿಯನ್ ಮಹಿಳೆಗೆ ವಿಧಿಸಿದ್ದ ಮರಣದಂಡನೆ ರದ್ದುಪಡಿಸಿ ಬಿಡುಗಡೆ ಮಾಡಬೇಕೆಂದು ಪೋಪ್ ಬೆನೆಡಿಕ್ಟ್-16 ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ