ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಧ್ಯಕ್ಷ ಜರ್ದಾರಿ ಪದಚ್ಯುತಿಗೆ ಐಎಸ್ಐ ಸಂಚು: ವಿಕಿಲೀಕ್ಸ್ (Pakistan | Rehman Malik | Asif Ali Zardari | ISI | Shuja Pasha)
Bookmark and Share Feedback Print
 
ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಪದಚ್ಯುತಿಗಾಗಿ ಐಎಸ್ಐ ವರಿಷ್ಠ ಜನರಲ್ ಅಹ್ಮದ್ ಶುಜಾ ಪಾಶಾ ವ್ಯವಸ್ಥಿತ ಸಂಚು ನಡೆಸಿರುವುದಾಗಿ ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಅಮೆರಿಕ ರಾಯಭಾರಿ ಅನ್ನೆ ಪ್ಯಾರ್ಟಸನ್ ಅವರಲ್ಲಿ ಹೇಳಿರುವುದಾಗಿ ವಿಕಿಲೀಕ್ಸ್ ಬಹಿರಂಗಪಡಿಸಿರುವ ದಾಖಲೆಯಿಂದ ಬಹಿರಂಗವಾಗಿದೆ.

ಪಾಶಾ ಅವರ ಸಂಚಿನ ಕುರಿತು ಮಾತನಾಡುವ ನಿಟ್ಟಿನಲ್ಲಿಯೇ ಮಲಿಕ್ ಅವರು 2009ರ ನವೆಂಬರ್ ತಿಂಗಳಿನಲ್ಲಿ ಪ್ಯಾಟರ್ಸನ್ ಅವರಲ್ಲಿ ತರಾತುರಿಯಾಗಿ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರುವುದಾಗಿ ವಿಕಿಲೀಕ್ಸ್ ಹೊರಹಾಕಿರುವ ಮಾಹಿತಿಯನ್ನು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ.

ಏನೇ ಆದರೂ ಐಎಸ್ಐ ವರಿಷ್ಠರು ಒಬ್ಬಂಟಿಯಾಗಿ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭರವಸೆಯನ್ನು ಪ್ಯಾಟರ್ಸನ್ ನೀಡಿದ್ದರು. ಅಷ್ಟೇ ಅಲ್ಲ ಜರ್ದಾರಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಬೇಕೆಂದು 2009ರ ಮಾರ್ಚ್‌ನಲ್ಲಿ ಅಮೆರಿಕ ರಾಯಭಾರಿಯನ್ನು ಕಯಾನಿ ಭೇಟಿಯಾಗಿ ಒತ್ತಾಯಿಸಿರುವ ಅಂಶವೂ ಬೆಳಕಿಗೆ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ