ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೆನಜೀರ್ ಹತ್ಯೆ ಕೇಸ್; ಪೊಲೀಸರ ಬಂಧನಕ್ಕೆ ಪಾಕ್ ಆದೇಶ (Pakistan | Benazir Bhutto | Saud Aziz | Khurram Shahzad)
Bookmark and Share Feedback Print
 
2007ರಲ್ಲಿ ಹತ್ಯೆಗೀಡಾಗಿದ್ದ ಮಾಜಿ ಪ್ರಧಾನ ಮಂತ್ರಿ ಬೆನಜೀರ್ ಭುಟ್ಟೋ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಲು ವಿಫಲರಾಗಿರುವ ಆರೋಪದ ಮೇಲೆ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸುವಂತೆ ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವೊಂದು ಆದೇಶ ನೀಡಿದೆ.

ಬೆನಜೀರ್ ಹತ್ಯಾ ಪ್ರಕರಣವು ಪಾಕಿಸ್ತಾನದ ಕರಾಳ ಇತಿಹಾಸಗಳಲ್ಲೊಂದಾಗಿದ್ದು, ಇದುವರೆಗೂ ಸಾವಿನ ನಿಗೂಢತೆಯನ್ನು ಸ್ಪಷ್ಟವಾಗಿ ಭೇದಿಸಲು ತನಿಖಾ ತಂಡಗಳಿಗೆ ಸಾಧ್ಯವಾಗಿಲ್ಲ.

ನ್ಯಾಯಾಲಯವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರೆಂಟುಗಳನ್ನು ಹೊರಡಿಸಿದೆ. ಅವರನ್ನು ಯಾವುದೇ ಹೊತ್ತಿನಲ್ಲಾದರೂ ಬಂಧಿಸಬಹುದು ಎಂದು ಸರಕಾರಿ ವಿಶೇಷ ವಕೀಲ ಚೌಧರಿ ಜುಲ್ಫೀಕರ್ ಆಲಿ ತಿಳಿಸಿದ್ದಾರೆ.

ಬೆನಜೀರ್ ಅವರ ರಕ್ಷಣೆಯ ಜವಾಬ್ದಾರಿ ಪೊಲೀಸರದ್ದಾಗಿತ್ತು. ಆದರೆ ಅವರು ಸಾಕಷ್ಟು ಭದ್ರತೆಯನ್ನು ಒದಗಿಸಲು ವಿಫಲರಾಗಿದ್ದರು. ಇತರೆ ಅಧಿಕಾರಿಗಳ ಪ್ರತಿರೋಧದ ಹೊರತಾಗಿಯೂ ದುರ್ಘಟನೆಯನ್ನು ಅವರು ತಣ್ಣಗೆಗೊಳಿಸಲು ಆದೇಶ ನೀಡಿದ್ದರು ಎಂದು ನಾನು ನ್ಯಾಯಾಲಯದಲ್ಲಿ ವಾದಿಸಿದ್ದೆ ಎಂದು ವಕೀಲರು ತಿಳಿಸಿದ್ದಾರೆ.

ಈ ಬಗ್ಗೆ ವಿವರಣೆ ನೀಡಲು ನ್ಯಾಯಾಲಯದ ಅಧಿಕಾರಿಗಳು ಲಭ್ಯರಾಗಿಲ್ಲ. ಆದರೆ ವಕೀಲರು ಹೇಳಿರುವ ಪ್ರಕಾರ ರಾವಲ್ಪಿಂಡಿಯ ಮಾಜಿ ಪೊಲೀಸ್ ಮುಖ್ಯಸ್ಥ ಸೌದ್ ಅಜೀಜ್ ಮತ್ತು ಅವರ ನಂತರದ ಅಧಿಕಾರಿ ಖುರ್ರಂ ಶಾಹ್ಜಾದ್ ಅವರನ್ನು ಬಂಧಿಸಲು ಆದೇಶ ನೀಡಲಾಗಿದೆ.

2007ರ ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಮುಗಿಸಿದ ನಂತರ ಬೆನಜೀರ್ ಮೇಲೆ ಬಂದೂಕು ಮತ್ತು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಗಿತ್ತು. ಘಟನೆಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಸಂಬಂಧಿತ ಮಾಹಿತಿ ಹುಡುಕಿ