ಅಮೆರಿಕ ಸರಕಾರದ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ ಮೂಲಕ ಹೊರಹಾಕಿರುವುದು ಜಗತ್ತಿನಾದ್ಯಂತ ತೀವ್ರ ಕೋಲಾಹಲವೇ ಸೃಷ್ಟಿಸಿದೆ. ಏತನ್ಮಧ್ಯೆ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸ್ಸಾಂಜೆ 'ಹೈಟೆಕ್ ಭಯೋತ್ಪಾದಕ' ಎಂದು ಸೆನೆಟ್‌ನ ರಿಪಬ್ಲಿಕನ್ ಮುಖಂಡ ಮಿಚ್ ಮೆಕ್‌ಕೊನ್ನೆಲ್ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕದ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿರುವುದರಿಂದ ಅಮೆರಿಕ ಸೇರಿದಂತೆ ಮಿತ್ರ ದೇಶಗಳ ನಡುವೆ ಅಪಾರ ಪ್ರಮಾಣದ ಹಾನಿ ಉಂಟಾಗಿರುವುದಾಗಿ ಅವರು ಕಿಡಿಕಾರಿದ್ದಾರೆ.
ವಿಕಿಲೀಕ್ಸ್ ಸ್ಥಾಪಕ ಜೂನಿಯಾನ್ ಅಸ್ಸಾಂಜೆ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕಾದ ಅಗತ್ಯವಿದೆ ಎಂದು ಮೆಕ್‌ಕೊನ್ನೆಲ್ಲ್ ಎನ್‌ಬಿಸಿ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಅಸ್ಸಾಂಜೆ ನಿಜಕ್ಕೂ ಹೈಟೆಕ್ ಭಯೋತ್ಪಾದಕ ಎಂದು ಈ ಸಂದರ್ಭದಲ್ಲಿ ಗಂಭೀರವಾಗಿ ಆರೋಪಿಸಿದರು.