ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬೊಜ್ಜು ಕರಗಿಸಿಕೊಂಡು ಲಕ್ಷಾಂತರ ರೂ.ಗೆದ್ದ ಭಾರತೀಯ! (Indina | Reality Show | TV | Prize,)
Bookmark and Share Feedback Print
 
ಜನಪ್ರಿಯ ಟಿವಿ ರಿಯಾಲಿಟಿ ಶೋನ ಬೊಜ್ಜು ಕಳೆದುಕೊಳ್ಳುವ ಸ್ಪರ್ಧೆಯಲ್ಲಿ ಭಾಗವಹಿಸಿ 67ಕೆಜಿ ತೂಕ ಕಳೆದುಕೊಂಡ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಈಗ ಅಪರೂಪದ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಏಷ್ಯಾದಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ದೇಹದ ಬೊಜ್ಜು ಕರಗಿಸಿಕೊಂಡ ವ್ಯಕ್ತಿ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಈ ಪ್ರಶಸ್ತಿಗೆ ಭಾಜನರಾಗಿರುವ ವಿವೇಕಾನಂದಂ ದೇವರಾಜ್ ಎಂಬ ಹೆಸರಿನ 24 ವರ್ಷದ ತರುಣ ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವನ್ನು ಗಳಿಸಿದರು. 144 ಕೆ.ಜಿ.ತೂಕವಿದ್ದ ದೇವರಾಜ್ ಅವರು ಆರು ತಿಂಗಳ ಅವಧಿಯಲ್ಲಿ 67ಕೆ.ಜಿ.ಯಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದರು ಎಂದು ಸ್ಟಾರ್ ನ್ಯೂಸ್ ವರದಿ ಮಾಡಿದೆ.

ಮನುಷ್ಯ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಸ್ಪರ್ಧೆ ಸಾಕ್ಷಿಯಾಗಿದೆ. ಇದು ಇತರರಿಗೂ ಸ್ಪೂರ್ತಿಯಾಗಬೇಕು ಎಂಬುದೇ ನನ್ನ ಆಸೆ. ಇದಕ್ಕಾಗಿ ನಾನು ದತ್ತಿ ಸಂಸ್ಥೆಯೊಂದನ್ನು ಆರಂಭಿಸಲು ನಿರ್ಧರಿಸಿದ್ದೇನೆ ಎಂದು ದೇವರಾಜ್ ಪ್ರತಿಕ್ರಿಯಿಸಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ