ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಂಡನ್: ಕೊನೆಗೂ ವಿಕಿಲೀಕ್ಸ್ ಅಸಾಂಜ್ ಬಂಧಮುಕ್ತ (WikiLeaks | Julian Assange | sexual offences | London jail)
Bookmark and Share Feedback Print
 
ಅಮೆರಿಕದ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದ ವಿಕಿಲೀಕ್ಸ್ ವೆಬ್‌ಸೈಟ್ ಸಂಸ್ಥಾಪಕ ಜೂಲಿಯಾನ್ ಅಸಾಂಜ್‌ಗೆ ಲಂಡನ್ ಹೈಕೋರ್ಟ್ ಜಾಮೀನು ನೀಡಿದ್ದು, ಗುರುವಾರ ಬಂಧಮುಕ್ತಗೊಂಡಿದ್ದಾರೆ.

ಸ್ವೀಡನ್‌ನಲ್ಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾಂಜ್ ಅವರನ್ನು ಬ್ರಿಟನ್ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ದಿನಗಳ ಹಿಂದೆ ಸಿಟಿ ಆಫ್ ವೆಸ್ಟ್‌ಮಿನಿಸ್ಟರ್ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು. ಆದರೆ ಈ ಜಾಮೀನನ್ನು ಪ್ರಶ್ನಿಸಿ ಸ್ವೀಡನ್ ಸರಕಾರಿ ವಕೀಲರು ಹೈಕೋರ್ಟ್ ಕಟಕಟೆ ಏರಿದ್ದರು.

ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ನೀಡಿದ್ದನ್ನು ಸಮರ್ಥಿಸಿಕೊಂಡಿತು. ಅಲ್ಲದೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿತು. ಆದರೆ ಲೈಂಗಿಕ ಆರೋಪದ ಬಗ್ಗೆ ಸ್ವೀಡನ್‌ಗೆ ತಮ್ಮನ್ನು ಹಸ್ತಾಂತರಿಸುವ ವಿಷಯದ ಕುರಿತು ಅವರು ಕಾನೂನು ಹೋರಾಟ ಮಾಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ