ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪೋಪ್ ನಡವಳಿಕೆ ಪಾಶ್ಚಾತ್ಯ ರಾಜಕಾರಣಿಯಂತಿದೆ: ಚೀನಾ (Chinese media | western politician | Pope | Vatican | Communist)
Bookmark and Share Feedback Print
 
ಧಾರ್ಮಿಕ ಸ್ವಾತಂತ್ರ್ಯಕ್ಕೆ ಚೀನಾ ಅಡ್ಡಿಪಡಿಸುತ್ತಿದೆ ಎಂಬ ಪೋಪ್ ಬೆನಡಿಕ್ಟ್ XVI ಗಂಭೀರವಾಗಿ ಆರೋಪಿಸಿರುವ ಹಿನ್ನೆಲೆಯಲ್ಲಿ, ಪೋಪ್ ಅವರ ನಡವಳಿಕೆ ಪಾಶ್ಚಾತ್ಯ ರಾಜಕಾರಣಿಯಂತೆ ಇರುವುದಾಗಿ ಚೀನಾ ಮಾಧ್ಯಮ ತಿರುಗೇಟು ನೀಡಿದೆ.

ಕ್ರಿಶ್ಚಿಯನ್ ಸಮುದಾಯದ ಪ್ರಮುಖ ಧಾರ್ಮಿಕ ಗುರು ಪೋಪ್ ಅವರ ನಡವಳಿಕೆ ಧಾರ್ಮಿಕ ಗುರುವಿಗಿಂತ, ಪಾಶ್ಚಾತ್ಯ ರಾಜಕಾರಣಿಯಂತೆ ಇರುವುದಾಗಿ ಗ್ಲೋಬಲ್ ಟೈಮ್ಸ್ ದೂರಿರುವುದಾಗಿ ಅದರ ಅಂಗಸಂಸ್ಥೆಯಾ ಪ್ರಕಟಣೆಯಾದ ಪೀಪಲ್ಸ್ ಡೈಲಿ ವರದಿ ಮಾಡಿದೆ.

ಪೋಪ್ ಬೆನಡಿಕ್ಟ್ XVI ಬಿಡುಗಡೆ ಮಾಡಿರುವ ಕ್ರಿಸ್‌ಮಸ್ 'ಶಾಂತಿ ಮತ್ತು ನಿರೀಕ್ಷೆ' ಸಂದೇಶದಲ್ಲಿ, ಚೀನಾ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರುತ್ತಿರುವುದಾಗಿ ಆರೋಪಿಸಿದ್ದರು.

ಇದೀಗ ಪೋಪ್ ಸಂದೇಶ ಚೀನಾ ತಲುಪಿದ ಬೆನ್ನಲ್ಲೇ, ವ್ಯಾಟಿಕನ್ ಮತ್ತು ಚೀನಾ ನಡುವೆ ಮಾತಿನ ಸಮರ ಆರಂಭಗೊಂಡಿದೆ. ಅಲ್ಲದೇ ಚೀನಾದಲ್ಲಿ ಏನು ಮಾಡಬೇಕೆಂಬ ಬಗ್ಗೆ ವ್ಯಾಟಿಕನ್ ಅಂಕಿತದ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ