ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ-ಐಎಸ್ಐ ಅಧಿಕಾರಿಗಳ ತನಿಖೆ: ಪಾಕಿಸ್ತಾನ (Benazir murder | Pakistan | PPP | ISI | Karachi)
Bookmark and Share Feedback Print
 
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿರುವ ಐಎಸ್ಐನ ಕೆಲವು ಅಧಿಕಾರಿಗಳನ್ನು ಪಾಕ್ ಸರಕಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ಬೆನಜೀರ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ವಿಸ್ತರಿಸುವ ಸಾಧ್ಯತೆ ಇರುವುದಾಗಿ ಡಾನ್ ವರದಿ ಮಾಡಿದೆ. ಭುಟ್ಟೋ ಹತ್ಯೆ ತನಿಖೆಗೆ ಮಾಡುವಂತೆ ಆದೇಶಿಸಿ ಮೂರು ವರ್ಷ ಕಳೆದಿದ್ದರೂ ಕೂಡ ಪ್ರಕರಣದ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ದೂರಲಾಗಿದೆ.

ಪ್ರಕರಣದ ಕುರಿತಂತೆ ಇತ್ತೀಚೆಗಷ್ಟೇ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರಿಗೂ ಪ್ರಶ್ನಾವಳಿಯನ್ನು ತನಿಖಾಧಿಕಾರಿಗಳು ರವಾನಿಸಿದ್ದರು.

ಆ ನಿಟ್ಟಿನಲ್ಲಿ ಐಎಸ್ಐನ ಕೆಲವು ಅಧಿಕಾರಿಗಳನ್ನೂ ತನಿಖೆಗೆ ಒಳಪಡಿಸುವ ಸಾಧ್ಯತೆ ಇರುವುದಾಗಿ ವರದಿ ಹೇಳಿದೆ. ಪಾಕಿಸ್ತಾನ ಪೀಪಲ್ಸ್ ಪಾರ್ಟಿ ತನಿಖೆಯನ್ನು ಚುರುಕುಗೊಳಿಸಿ, ಶೀಘ್ರವೇ ಅಂತಿಮ ಫಲಿತಾಂಶ ನೀಡಲು ತಾಕೀತು ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ