ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಗವರ್ನರ್ ಹತ್ಯೆಗೆ ಬಹುಮಾನ ಘೋಷಿಸಿದ್ದ ವ್ಯಕ್ತಿ ಸೆರೆ (Pak police | reward for killing | Pakistan | Salmaan Taseer | Governor)
Bookmark and Share Feedback Print
 
ದೇಶದ ಧಾರ್ಮಿಕ ನಿಂದನೆ ಕಾಯ್ದೆಯನ್ನು ವಿರೋಧಿಸುವ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಹತ್ಯೆಗೈದವರಿಗೆ 20 ಮಿಲಿಯನ್ ಬಹುಮಾನ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದ ವ್ಯಕ್ತಿಯನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಇಸ್ಲಾಮಾಬಾದ್ ಮಾರ್ಕೆಟ್ ಪ್ರದೇಶದ ಸಮೀಪ ಕಾರಿನಲ್ಲಿ ಕುಳಿತಿದ್ದ ಧಾರ್ಮಿಕ ನಿಂದನೆ ಕಾಯ್ದೆ ವಿರೋಧಿಸಿದ್ದ ಗವರ್ನರ್ ಸಲ್ಮಾನ್ ಅವರನ್ನು ಅಂಗರಕ್ಷಕನೇ ಗುಂಡಿಟ್ಟು ಹತ್ಯೆಗೈದಿದ್ದ. ಇದೀಗ ಸಲ್ಮಾನ್ ಅವರ ಹತ್ಯೆಗೆ ಬಹುಮಾನ ಘೋಷಿಸಿದ್ದ ಮುಲ್ತಾನ್ ಸಮೀಪದ ಕಾಂಗ್ರಾ ಪ್ರದೇಶದ ಸರ್ದಾರ್ ಎಬ್ಬಾದ್ ಡೋಗಾರ್ ಎಂಬಾತನನ್ನು ಪಾಕ್ ಪೊಲೀಸರು ಸೆರೆ ಹಿಡಿದಿದ್ದಾರೆ.

ಬಂಧಿತ ಡೋಗಾರ್‌ನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗವರ್ನರ್ ತಾಸೀರ್ ಅವರನ್ನು ಹತ್ಯೆಗೈದವರಿಗೆ 20 ಮಿಲಿಯನ್ ಹಣ ನೀಡುವುದಾಗಿ ಕಳೆದ ಶುಕ್ರವಾರ ಡೋಗಾರ್ ಸಾರ್ವಜನಿಕ ಸಮಾರಂಭವೊಂದರಲ್ಲಿ ಘೋಷಿಸಿದ್ದ.

ಅಷ್ಟೇ ಅಲ್ಲ ಸಮಾರಂಭದ ನಂತರ ಸುದ್ದಿಗಾರರ ಜತೆ ಮಾತನಾಡುತ್ತ, ಗವರ್ನರ್ ಹತ್ಯೆಗೆ ಬಹುಮಾನ ಘೋಷಿಸಿರುವ ಬಗ್ಗೆ ಯಾವುದೇ ಅಳುಕು ಇಲ್ಲ ಎಂದು ತಿಳಿಸಿದ್ದ. ಡೋಗಾರ್ ಪಿಎಂಎಲ್ ಕ್ಯೂ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮುನ್ನ ನಿಷೇಧಿತ ಸಿಫಾ ಇ ಸಾಹಾಬಾ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ