ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಒಂಟಿತನ; 110ರ ಅಜ್ಜನಿಗೆ ಮದುವೆಯಾಗೋ ಬಯಕೆ! (Malaysian man | Lonely | Ahmad Mohammad | Zainab Salleh | remarry)
Bookmark and Share Feedback Print
 
ಜೀವನ ಸಂಗಾತಿ ಇಲ್ಲದೆ ಒಬ್ಬಂಟಿತನದ ಬದುಕು ತುಂಬಾ ಬೋರ್ ಆಗಿದೆಯಂತೆ. ಅದಕ್ಕಾಗಿ ಶೀಘ್ರದಲ್ಲೇ ಮದುವೆಯಾಗಬೇಕಂಬ ಇಚ್ಛೆ ಈ ವಿದುರನದ್ದು. ವಿವಾಹವಾಗಲು ತುದಿಗಾಲಲ್ಲಿ ನಿಂತಿರುವ ಈ ವ್ಯಕ್ತಿಯ ವಯಸ್ಸು ಬರೋಬ್ಬರಿ 110!

20 ಮೊಮ್ಮಕ್ಕಳು, 40 ಮರಿಮೊಮ್ಮಕ್ಕಳು ಜತೆ ವಾಸಿಸುತ್ತಿರುವ 110 ವಯಸ್ಸಿನ ಅಹ್ಮದ್ ಮೊಹಮ್ಮದ್ ಐಸಾ, ಶತಮಾನವನ್ನು ಕಂಡ ವ್ಯಕ್ತಿಯಾಗಿದ್ದಾರೆ. ಆದರೆ ಬಾಳಲ್ಲಿ ಸಂಗಾತಿ ಇಲ್ಲದೆ ಜೀವನ ಒಂಟಿತನ ಎನಿಸಿದೆಯಂತೆ.

ಆದರೂ ಅಜ್ಜ ತುಂಬಾ ಆಶಾವಾದಿ, ಹಾಗಾಗಿ ಮರು ಮದುವೆಯಾಗುವ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಅಜ್ಜನಿಗೆ ಈಗಾಗಲೇ ತಾವು ಮದುವೆಯಾಗಲು ಸಿದ್ದರಿದ್ದೇವೆ ಎಂದು ಇಬ್ಬರು ಅಜ್ಜಿಯರು ಮುಂದೆ ಬಂದಿದ್ದಾರಂತೆ! ಅವರಲ್ಲಿ ಒಬ್ಬರಿಗೆ 70ರ ಹರೆಯ, ಮತ್ತೊಬ್ಬರಿಗೆ 82ರ ವಯಸ್ಸು.

'ಅವರು ನನ್ನನ್ನು ಒಪ್ಪುವುದಾದರೆ ನಾನು ಅವರ ಜತೆ ಬದುಕಲು ಸಿದ್ದಳಿದ್ದೇನೆ' ಎಂದು ಕೆಧಾ ರಾಜ್ಯದ 70ರ ಅಜ್ಜಿ ಜೈನಾಬ್ ಸಾಲ್ಲೆಹಾ ಸ್ಥಳೀಯ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ನೂರು ವರ್ಷ ದಾಟಿರುವ ವ್ಯಕ್ತಿಯ ಜತೆ ಮದುವೆಯಾಗುವ ಬಗ್ಗೆ ತನ್ನದೇನೂ ಅಭ್ಯಂತರವಿಲ್ಲ. ಆದರೆ ಮದುವೆಯಾದ ಮೇಲೆ ಕೆಧಾ ಗ್ರಾಮದಲ್ಲಿ ಇರಲು ಬಯಸುವುದಿಲ್ಲ ಎಂದು ಅಜ್ಜಿ ಸ್ಪಷ್ಟಪಡಿಸಿದ್ದಾರೆ.

ತನ್ನ ಗಂಡ ವಿಧಿವಶರಾಗಿ 15 ವರ್ಷವಾಗಿದೆ. ನನಗೆ 30ರಿಂದ 53ರ ಹರೆಯದ ಎಂಟು ಮಕ್ಕಳಿದ್ದಾರೆ. ನನಗೂ ಒಂಟಿತನ ಕಾಡುತ್ತಿದೆ. ಹಾಗಾಗಿ ಅವರನ್ನು(!) ಮದುವೆಯಾಗುವುದರಿಂದ ಒಂಟಿತನ ನಿವಾರಿಸಿದಂತಾಗುತ್ತದೆ ಎಂದು ಪತ್ರಿಕೆಗೆ ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅದೇ ರೀತಿ ಕೌಲಾಲಂಪುರದ ನಿವಾಸಿ 82 ವರ್ಷದ ಅಜ್ಜಿ ಸಾನಾ ಅಹ್ಮದ್ ಕೂಡ ಅಜ್ಜನನ್ನು ಮದುವೆಯಾಗುವ ಬಗ್ಗೆ ಇದೇ ಪತ್ರಿಕೆಗೆ ತಿಳಿಸಿದ್ದರು. ಈ ಬಗ್ಗೆ ಜೈನಾಬ್ ಪ್ರತಿಕ್ರಿಯೆ ನೀಡಿ, ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ನನ್ನ ಅದೃಷ್ಟವನ್ನು ನಂಬುತ್ತೇನೆ ಎಂದರು.

ಪತ್ರಿಕೆಯಲ್ಲಿ ಪ್ರಕಟವಾದ ಹೇಳಿಕೆಯನ್ನು ಗಮನಿಸಿದ ಮಕ್ಕಳು ತಮಾಷೆ ಮಾಡಿರುವುದಾಗಿಯೂ ಅಜ್ಜಿ ತಿಳಿಸಿದ್ದಾಳೆ. ಆದರೂ ತಾನು ಮರು ಮದುವೆಯಾಗುವುದನ್ನು ಮಕ್ಕಳು ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿರುವುದಾಗಿ ಹೇಳಿದ್ದಾಳೆ.

'ಒಂಟಿತನದಿಂದ ಬದುಕಲು ತುಂಬಾ ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಒಬ್ಬನಿಗೆ ಮಲಗಲು ತುಂಬಾ ಹೆದರಿಕೆಯಾಗುತ್ತೆ. ಹಾಗಾಗಿ ಹೆಂಡತಿ ಇದ್ದರೆ ಆಕೆ ನನ್ನ ಬಗ್ಗೆ ಕಾಳಜಿ ವಹಿಸುತ್ತಾಳೆ' ಎಂಬುದು ಅಹ್ಮದ್ ನುಡಿ. ಈಗಾಗಲೇ ತಾನು ಐದು ಮದುವೆಯಾಗಿರುವುದಾಗಿಯೂ ಅಜ್ಜ ತಿಳಿಸಿದ್ದಾರೆ. ವಿಪರ್ಯಾಸವೆಂದರೆ ಸರಿಯಾಗಿ ಕಣ್ಣು ಕಾಣಿಸದಿರುವುದು ಮತ್ತು ಕಿವಿ ಕೇಳಿಸದ ಪರಿಣಾಮ ಐದನೇ ಪತ್ನಿ ವಿಚ್ಛೇದನ ಪಡೆದುಕೊಂಡಿದ್ದಾಳಂತೆ. ನಾಲ್ವರು ಪತ್ನಿಯರು ಸಾವನ್ನಪ್ಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ