ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದ್ಯಾರ್ಥಿನಿಯರು ಟೈಟ್ ಜೀನ್ಸ್ ಹಾಕ್ಬಾರ್ದು: ಇರಾನ್ (tight jeans | tattoos | female students | ban | dress code)
Bookmark and Share Feedback Print
 
ಯೂನಿರ್ವಸಿಟಿಯ ವಿದ್ಯಾರ್ಥಿನಿಯರು ಟೈಟ್ ಜೀನ್ಸ್, ಹೊಳೆಯುವ ಬಟ್ಟೆ ಧರಿಸಲು ಹಾಗೂ ಹಚ್ಚೆ (ಟ್ಯಾಟ್ಟೋಸ್) ಹಾಕಿಸಿಕೊಳ್ಳುವುದಕ್ಕೆ ಇರಾನ್ ನಿಷೇಧ ಹೇರುವ ಮೂಲಕ ಇಸ್ಲಾಮಿಕ್‌ನ ಕಠಿಣ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಸ್ಥಳೀಯ ನ್ಯೂಸ್ ಏಜೆನ್ಸಿ ವರದಿಯೊಂದು ತಿಳಿಸಿದೆ.

ಡ್ರೆಸ್ ಕೋಡ್ ಪಾಲಿಸುವಂತೆ ಸೂಚಿಸಿರುವ ಯೂನಿರ್ವಸಿಟಿಗಳ ಪಟ್ಟಿಯನ್ನು ಸೆಮಿ ಅಫಿಸಿಯಲ್ ಫಾರಸ್ ನ್ಯೂಸ್ ಏಜೆನ್ಸಿ ಪ್ರಕಟಿಸಿದೆ.ಹೊಸ ಕಾನೂನಿನ ಪ್ರಕಾರ ಮಹಿಳೆಯರು ಟೋಫಿ ಧರಿಸುವಂತೆಯೂ ಇಲ್ಲ. ಅದೇ ರೀತಿ ಬಿಗಿದಾದ ಜೀನ್ಸ್, ಶಾರ್ಟ್ ಜೀನ್ಸ್, ದೇಹ ಕಾಣಿಸುವ ಬಟ್ಟೆ ಧರಿಸದಂತೆ ನಿಷೇಧ ಹೇರಿರುವುದಾಗಿ ವರದಿ ವಿವರಿಸಿದೆ.

ಯುವತಿಯರು ಉದ್ದನೆಯ ಉಗುರು ಹೊಂದುವುದು, ಟ್ಯಾಟ್ಟೋಸ್ ಹಾಕಿಸಿಕೊಳ್ಳುವುದು, ಟೈಟ್ ಓವರ್ ಕೋಟ್ ಮತ್ತು ಹೊಳೆಯುವ ಬಟ್ಟೆಗಳನ್ನು ಧರಿಸದಂತೆ ನಿಷೇಧ ಹೇರಿದೆ.

ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದ ವಿರುದ್ಧ ಇರಾನ್ ಸತತವಾಗಿ ಹೋರಾಡುತ್ತಲೇ ಬಂದಿದ್ದು, ಆ ನಿಟ್ಟಿನಲ್ಲಿ 1979ರಲ್ಲಿನ ಕ್ರಾಂತಿಯ ನಂತರ ಇಸ್ಲಾಮ್ ಕಾನೂನನ್ನು ಹೇರಲಾಗಿತ್ತು. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ತಲೆಗೂದಲು ಸೇರಿದಂತೆ ಇಡೀ ದೇಹ ಮುಚ್ಚಿಕೊಳ್ಳುವಂತೆ ಬುರ್ಖಾ ಧರಿಸುವುದನ್ನು ಕಡ್ಡಾಯ ಮಾಡಿತ್ತು.

ಈ ನಿಷೇಧ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳು ಕೂಡ ತಲೆಕೂದಲನ್ನು ಡೈ ಮಾಡಿಕೊಳ್ಳುವುದಾಗಲಿ, ಟೈಟ್ ಪ್ಯಾಂಟ್, ಅಂಗಿ, ಆಭರಣ ಧರಿಸದಂತೆ ಹೊಸ ಕಾಯ್ದೆಯಲ್ಲಿ ಸೂಚಿಸಿದೆ ಎಂದು ವರದಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ