ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಧಾರ್ಮಿಕ ನಿಂದನೆ-ಇಮಾಮ್‌, ಪುತ್ರನಿಗೆ ಜೀವಾವಧಿ ಶಿಕ್ಷೆ (Pakistan | blasphemy | court | Salmaan Taseer | Punjab Governor)
Bookmark and Share Feedback Print
 
ವಿವಾದಿತ ಧಾರ್ಮಿಕ ನಿಂದನಾ ಆರೋಪದ ಹಿನ್ನಲೆಯಲ್ಲಿ ಇಮಾಮ್ ಹಾಗೂ ಅವರ ಪುತ್ರನನ್ನು ದೋಷಿ ಎಂದು ಘೋಷಿಸಿರುವ ಪಾಕಿಸ್ತಾನ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇತ್ತೀಚೆಗಷ್ಟ ಧಾರ್ಮಿಕಾ ನಿಂದನಾ ಕಾಯ್ದೆಯನ್ನು ಟೀಕಿಸಿದ್ದ ಪಂಜಾಬ್ ಪ್ರಾಂತ್ಯದ ರಾಜ್ಯಪಾಲ ಸಲ್ಮಾನ್ ತಾಸೀರ್ ಅವರನ್ನು ಸ್ವತಃ ಅಂಗರಕ್ಷಕ ಮಲಿಕ್ ಅವರನ್ನು ಗುಂಡಿಟ್ಟು ಕೊಂದಿದ್ದ. ಇದೀಗ ಪಂಜಾಬ್ ಪ್ರಾಂತ್ಯದ ಡೇರಾ ಘಾಜಿ ಖಾನ್‌ನಲ್ಲಿನ ಭಯೋತ್ಪಾದನಾ ನಿಗ್ರಹ ಕೋರ್ಟ್ ನ್ಯಾಯಾಧೀಶ ರಾವ್ ಅಯೂಬ್ ಅವರು ಧಾರ್ಮಿಕ ನಿಂದನಾ ಆರೋಪದಡಿಯಲ್ಲಿ 45ರ ಹರೆಯದ ಇಮಾಮ್ ಮೊಹಮ್ಮದ್ ಶಫಿ ಮತ್ತು ಪುತ್ರ ಮೊಹಮ್ಮದ್ ಅಸ್ಲಾಮ್ (20)ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಲಾಹೋರ್‌ನಿಂದ 400 ಕಿ.ಮೀ. ದೂರದ ಮುಜಾಫರ್‌ಗಡ ಮಸೀದಿಯ ಇಮಾಮ್ ಆಗಿ ಶಫಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅಂಗಡಿಯೊಂದರ ಹೊರಭಾಗದಲ್ಲಿ ಅಂಟಿಸಿದ್ದ ಫೋಸ್ಟರ್ ಅನ್ನು ಕಿತ್ತುಹಾಕಿದ್ದ ಪುತ್ರನನ್ನು ಕಳೆದ ವರ್ಷ ಪೊಲೀಸರು ಬಂಧಿಸಿದ್ದರು. ಕುರಾನ್‌ಗೆ ಸಂಬಂಧಿಸಿದ ಪೋಸ್ಟರ್ ಅನ್ನು ಅಸ್ಲಾಮ್ ಕಿತ್ತುಹಾಕಿದ್ದ.

ಅಸ್ಲಾಮ್ ಪ್ರವಾದಿ ಮೊಹಮ್ಮದ್ ಅವರ ಜನ್ಮ ದಿನಾಚರಣೆ ಅಂಗವಾಗಿ ಅಂಟಿಸಿದ್ದ ಫೋಸ್ಟರ್ ಅನ್ನು ಹರಿದು ಕಾಲಿನಲ್ಲಿ ತುಳಿದು ಚಿಂದಿ ಮಾಡಿದ್ದ. ಈ ಬಗ್ಗೆ ಕಾರ್ಯಕ್ರಮದ ಸಂಘಟಕರು ಆತನ ವಿರುದ್ಧ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಯೂಬ್ ಅವರು ಜೀವಾವಧಿ ಶಿಕ್ಷೆಯನ್ನು ವಿಧಿಸಿ, ತಲಾ 210,000 ದಂಡ ವಿಧಿಸುವಂತೆ ಕೋರ್ಟ್ ಆದೇಶ ನೀಡಿತ್ತು. ಆದರೆ ಕೋರ್ಟ್‌ನ ತೀರ್ಪಿನ ವಿರುದ್ಧ ಲಾಹೋರ್ ಹೈಕೋರ್ಟ್ ಮೆಟ್ಟಿಲೇರುವುದಾಗಿ ಶಫಿ ಪರ ವಕೀಲರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ