ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ನಾಲ್ವರು ದರೋಡೆಕೋರರು ತಾಲಿಬಾನ್ ಗುಂಡಿಗೆ ಬಲಿ (Taliban militants | gunned down | robbers | Pakistan)
Bookmark and Share Feedback Print
 
ನಾಲ್ವರು ದರೋಡೆಕೋರರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಂಗಳವಾರ ಪಾಕಿಸ್ತಾನದ ವಾಯುವ್ಯ ಪ್ರದೇಶದ ಹಾಂಗ್ಯೂನಲ್ಲಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾವನ್ನಪ್ಪಿದ ನಾಲ್ವರನ್ನು ಮುಹಮ್ಮದ್ ಅನ್ವರ್, ಮುಹಮ್ಮದ್ ಫಾರೂಕ್, ಘಾಜಿ ಮತ್ತು ಶಾರಾಬಿ ಎಂದು ಗುರುತಿಸಲಾಗಿದೆ. ನಾಲ್ಕು ಶವಗಳನ್ನು ಹಾಂಗ್ಯೂ ಜಿಲ್ಲೆಯ ಸಾರ್ಕ್ ಡಾನಾ ರಸ್ತೆ ಸಮೀಪ ಎಸೆದು ಹೋಗಿರುವುದಾಗಿ ವಿವರಿಸಿದ್ದಾರೆ.

ನಾಲ್ವರು ದರೋಡೆಕೋರರಾಗಿದ್ದು, ಅವರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದರು. ಅವರು ಸಮಾಜವಿರೋಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.

ಹತ್ಯೆಗೊಳಗಾದ ನಾಲ್ವರ ಶವಸಂಸ್ಕಾರಕ್ಕೆ ತೆರಳದಂತೆಯೂ ತಾಲಿಬಾನ್ ಉಗ್ರರು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಈ ಎಚ್ಚರಿಕೆಯನ್ನು ಕಡೆಗಣಿಸಿ ಯಾರಾದರು ಶವಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡರೆ ಅವರಿಗೂ ಇದೇ ಗತಿಯಾಗಲಿದೆ ಎಂದು ಬೆದರಿಕೆ ಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ