ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹಂತಕರನ್ನು ಏನೂ ಮಾಡಲು ಸಾಧ್ಯವಿಲ್ಲ: ಹಕೀಂ ಅಲಿ (Musharraf | Pervez Musharraf | Benazir Bhutto | Pakistan | Hakim Ali Zardari,)
ಮಾಜಿ ಪ್ರಧಾನಿ ಬೆನಜೀರ್ ಅವರ ಹತ್ಯಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅವರು ಶಾಮೀಲಾಗಿದ್ದಾರೆ ಎಂದು ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ತಂದೆ ಹಕೀಮ್ ಅಲಿ ಜರ್ದಾರಿ ಆರೋಪಿಸಿದ್ದಾರೆ.

ಏನೇ ಆದರೂ ಬೆನಜೀರ್ ಹಂತಕರನ್ನು ಬಂಧಿಸಲು ಸಾಧ್ಯವಿಲ್ಲ. ಯಾಕೆಂದರೆ ಆರೋಪಿಗಳ ಹಿಂದೆ ದೇಶದ ಪ್ರಭಾವಿ ಜನರ ಬೆಂಬಲ ಇದೆ ಎಂದು ಅವರು ಟಿವಿ ಚಾನೆಲ್‌ವೊಂದರ ಜತೆ ಮಾತನಾಡುತ್ತ ತಿಳಿಸಿರುವುದಾಗಿ ದಿ ನೇಷನ್ ವರದಿ ಮಾಡಿದೆ.

ಪಾಕಿಸ್ತಾನದ ಆಡಳಿತಾರೂಢ ಪಿಪಿಪಿ ಮೈತ್ರಿಕೂಟದ ಸರಕಾರವನ್ನು ಎಂಕ್ಯೂಎಂ ಪಕ್ಷ ಬ್ಲ್ಯಾಕ್‌ಮೇಲ್ ಮಾಡುತ್ತಿರುವುದಾಗಿ ದೂರಿದರು. ಅಲ್ಲದೇ ಪಿಎಂಎಲ್‌-ಎಫ್ ವರಿಷ್ಠ ಪಿರ್ ಪಾಗಾರಾ ಅವರ ಭವಿಷ್ಯವಾಣಿಗೆ ಯಾವುದೇ ಬೆಲೆ ಇಲ್ಲ ಎಂದು ತಿಳಿಸಿದ್ದಾರೆ.

ಭುಟ್ಟೋ ಪುತ್ರ ಬಿಲ್ವಾಲ್ ಭುಟ್ಟೋ ಜರ್ದಾರಿ ಒಂದು ಸಲ ರಾಜಕೀಯ ಪ್ರವೇಶಿಸಿದ ಮೇಲೆ ಪಿರ್ ಪಾಗಾರ್ ಈ ಜಗತ್ತಿನಲ್ಲಿಯೇ ಇರುವುದಿಲ್ಲ ಎಂದು ಹಕೀಮ್ ಹೇಳಿದ್ದಾರೆ.
ಇವನ್ನೂ ಓದಿ