ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕನ್‌ರಿಗೆ ಚೀನಾವೇ ಹೆಚ್ಚು ಇಷ್ಟ,ಭಾರತಕ್ಕೆ ಕೊನೆ ಸ್ಥಾನ! (America | China | Gallup opinion poll | India ranks last)
ಚೀನಾದಲ್ಲಿ ನಡೆಯುವ ಎಲ್ಲಾ ರೀತಿಯ ಬೆಳವಣಿಗೆಗಳು ಅಮೆರಿಕದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ತಮಗೆ ಚೀನಾವೇ ಅಚ್ಚುಮೆಚ್ಚು ಎಂಬುದು ಬಹುತೇಕ ಅಮೆರಿಕನ್‌ ಪ್ರಜೆಗಳ ಅಭಿಪ್ರಾಯ, ಆದರೆ ಇದರಲ್ಲಿ ಭಾರತಕ್ಕೆ ಕೊನೆಯ ಸ್ಥಾನ ಲಭಿಸಿದೆ ಎಂದು ಗ್ಯಾಲ್ಲುಪ್ ಅಭಿಪ್ರಾಯ ಸಂಗ್ರಹ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಜಾಗತಿಕವಾಗಿ ಬಹುತೇಕ ಮಂದಿಗೆ ಅಮೆರಿಕ ಅಚ್ಚುಮೆಚ್ಚು, ಆದರೆ ಅಮೆರಿಕನ್‌ರಿಗೆ ಚೀನಾವೇ ಹೆಚ್ಚು ಇಷ್ಟವಂತೆ. ಪ್ರತಿ ಹತ್ತು ಮಂದಿ ಅಮೆರಿಕನ್‌ರಲ್ಲಿ ಏಳು ಮಂದಿ ಚೀನಾ ಪರ ಒಲವು ವ್ಯಕ್ತಪಡಿಸಿದರೆ, ಭಾರತದ ಬಗ್ಗೆ ಹತ್ತರಲ್ಲಿ ಕೇವಲ 3 ಮಂದಿ ಒಲವು ವ್ಯಕ್ತಪಡಿಸಿರುವುದಾಗಿ ನೂತನ ಸಮೀಕ್ಷೆ ತಿಳಿಸಿದೆ.

ಸುಮಾರು 12 ದೇಶಗಳ ಪಟ್ಟಿಯಲ್ಲಿ ಅಮೆರಿಕನ್‌ರು ಚೀನಾಕ್ಕೆ ಪ್ರಥಮ ಸ್ಥಾನ ಕಲ್ಪಿಸಿಕೊಟ್ಟಿದ್ದು, ಭಾರತ ಕೊನೆಯ ಸ್ಥಾನ ಪಡೆದಿದೆ. ಇದರಲ್ಲಿ ಅಫ್ಘಾನಿಸ್ತಾನ 6ನೇ ಸ್ಥಾನ, ಪಾಕಿಸ್ತಾನ 8 ಹಾಗೂ ಈಜಿಪ್ಟ್ 9ನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಶೀತಲ ಸಮರದ ಸಂದರ್ಭದಲ್ಲಿ ಸೂಪರ್ ಪವರ್ ದೇಶವಾಗಿದ್ದ ರಷ್ಯಾ ಕೂಡ ಭಾರತಕ್ಕಿಂತ ಒಂದು ಸ್ಥಾನ ಮುಂದಿದೆ. ಯಾವ ದೇಶ ಹೆಚ್ಚು ಇಷ್ಟ ಎಂಬ ಬಗ್ಗೆ ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಚೀನಾ ಪರವೇ ಹೆಚ್ಚಿನ ಒಲವು ವ್ಯಕ್ತವಾಗಿದೆ ಎಂದು ಹೇಳಿದೆ.

ಅಷ್ಟೇ ಅಲ್ಲ ಕಳೆದ ನಾಲ್ಕು ವರ್ಷಗಳಲ್ಲಿ ಇರಾಕ್‌ನಲ್ಲಿ ಸಾಕಷ್ಟು ಉತ್ತಮವಾದ ಬೆಳವಣಿಗೆ ನಡೆದಿರುವುದಾಗಿ ಅಮೆರಿಕನ್ ಪ್ರಜೆಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2007ರಲ್ಲಿ ಸಮೀಕ್ಷೆ ನಡೆಸಿದ ಸಂದರ್ಭದಲ್ಲಿಯೂ ಭಾರತ 12 ದೇಶಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆದರೆ ಆ ಸಂದರ್ಭದಲ್ಲಿ ಕೇವಲ ಶೇ.28ರಷ್ಟು ಅಮೆರಿಕರನ್‌ರು ಭಾರತ ಪ್ರಮುಖ ದೇಶ ಎಂಬುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದರೆ, ಈ ಬಾರಿ ಶೇ.31ರಷ್ಟು ಮಂದಿ ಒಲವು ವ್ಯಕ್ತಪಡಿಸಿರುವುದಾಗಿ ಗ್ಯಾಲ್ಲುಪ್ ವಿವರಿಸಿದೆ.
ಇವನ್ನೂ ಓದಿ