ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್, ಟ್ಯುನಿಷಿಯಾ ಕ್ರಾಂತಿ ಆಯ್ತು, ಈಗ ಲಿಬ್ಯಾ ಸರದಿ (Moammar Gadhafi | Egypt | Tunisia | Libya | Anti-govt protests)
ಈಜಿಪ್ಟ್, ಟ್ಯುನಿಶಿಯಾದಲ್ಲಿ ನಾಗರಿಕರು ಅಧ್ಯಕ್ಷರ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಿ ಯಶಸ್ವಿಯಾದ ಬೆನ್ನಲ್ಲೇ, ಇದೀಗ ಲಿಬ್ಯಾದಲ್ಲಿಯೂ ನೂರಾರು ಜನರು ಸರಕಾರದ ವಿರುದ್ಧ ಬೀದಿಗಿಳಿದಿದ್ದಾರೆ.

ಲಿಬ್ಯಾ(ಮಹಾನ್ ಲಿಬ್ಯಾ ಸಾಮಾಜಿಕ ಅರಬ್ ಜನಗಣರಾಜ್ಯ) ಉತ್ತರ ಆಫ್ರಿಕಾದ ಒಂದು ಅರಬ್ ದೇಶವಾಗಿದೆ. ನೂರಾರು ಪ್ರತಿಭಟನಾಕಾರರು ದೇಶದ ಬಂದರು ನಗರಿಯಾದ ಬೆಂಗಾಜೈನ ಬೀದಿಯಲ್ಲಿ ನೆರೆದಿದ್ದು, ಪ್ರಧಾನಿ ಬಾಗ್ದಾದಿ ಅಲ್ ಮಹಮೌದಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ ಪ್ರತಿಭಟನಾಕಾರರು ದೇಶವನ್ನು 40 ವರ್ಷಕ್ಕೂ ಅಧಿಕ ಕಾಲ ಆಳುತ್ತಾ ಬಂದಿರುವ ಅಧ್ಯಕ್ಷ ಮೊಮ್ಮರ್ ಗಡಾಫಿ ವಿರುದ್ಧ ನೇರವಾಗಿಆಕ್ರೋಶ ವ್ಯಕ್ತಪಡಿಸದೆ ಪರೋಕ್ಷವಾಗಿ ಗದ್ದುಗೆ ತೊರೆಯುವಂತೆ ಟಾಂಗ್ ನೀಡಿದ್ದಾರೆ.

ಸುಮಾರು 30 ವರ್ಷಗಳ ಕಾಲ ಸರ್ವಾಧಿಕಾರ ನಡೆಸಿದ್ದ ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ವಿರುದ್ಧ ಜನರು ತಿರುಗಿಬಿದ್ದು ಪ್ರತಿಭಟನೆ ನಡೆಸಿದ ಪರಿಣಾಮ ಕೊನೆಗೂ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅದೇ ರೀತಿ ಟ್ಯುನಿಶಿಯಾದ ಸರ್ವಾಧಿಕಾರಿ ಬೆನ್ ಅಲಿ ವಿರುದ್ಧವೂ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದ ಪರಿಣಾಮ ಅಧ್ಯಕ್ಷಗಾದಿಗೆ ಗುಡ್ ಬೈ ಹೇಳಿ ವಿದೇಶಕ್ಕೆ ಪರಾರಿಯಾಗಿದ್ದರು.

ಇದೀಗ ಲಿಬ್ಯಾ ಕಾರ್ಯಕರ್ತರು ಸಾಮಾಜಿಕ ಸಂಪರ್ಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಗುರುವಾರದ ಬಂದ್‌ಗೆ ಕರೆ ನೀಡಿದ್ದಾರೆ. ಆದರೆ ದೇಶದಲ್ಲಿ ಬುಧವಾರ ಸರಕಾರದ ವಿರುದ್ಧ ನಡೆದ ಪ್ರತಿಭಟನೆ ಬಗ್ಗೆ ಸರಕಾರಿ ಸ್ವಾಮಿತ್ವದ ಅಧಿಕೃತ ನ್ಯೂಸ್ ಏಜೆನ್ಸಿ ಯಾವುದೇ ಒಂದು ಸುದ್ದಿಯನ್ನು ಪ್ರಕಟಿಸಿಲ್ಲ.

40 ವರ್ಷಕ್ಕಿಂತಲೂ ಅಧಿಕವಾಗಿ ದೇಶವನ್ನು ಆಳಿರುವ ಗಡಾಫಿ ಅಧಿಕಾರವನ್ನು ತ್ಯಜಿಸಬೇಕೆಂದು ಸಂಘಟನೆಗಳು ಪ್ರಕಟಣೆಯಲ್ಲಿ ತಿಳಿಸಿವೆ. ಗಡಾಫಿ 1969ರಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದು, ಈವರೆಗೂ ಆಡಳಿತ ನಡೆಸುತ್ತಿದ್ದಾರೆ. ದೇಶದಲ್ಲಿ ಯಾವುದೇ ಸಂಸತ್ ಅಥವಾ ಸಂವಿಧಾನ ಇಲ್ಲ. ಇಲ್ಲಿ ಎಲ್ಲವೂ ಗಡಾಫಿಯದ್ದೇ ಕಾರುಬಾರು. ತಾನೂಬ್ಬ ಕ್ರಾಂತಿಕಾರಿ ಮುಖಂಡ, ಹಾಗಾಗಿ ದೇಶದಲ್ಲಿ ಬೇರೆ ಯಾವುದಕ್ಕೂ ಅವಕಾಶ ಇಲ್ಲ ಎಂಬುದು ಗಡಾಫಿ ನಿಲುವು.
ಇವನ್ನೂ ಓದಿ