ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರೀ ಗಾತ್ರದ ಸ್ತನ; ಯುವತಿ ಸ್ಥಿತಿ ಹೇಗಾಗಿದೆ ಗೊತ್ತಾ? (world's largest boobs | coma | suicide attempt | Sheyla Hershey | Brazil)
ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಯಂತೆ ಬ್ರೆಜಿಲ್‌ನ ಮಹಿಳೆಯೊಬ್ಬಳು ತನ್ನ ಸ್ತನದ ಗಾತ್ರ ದೊಡ್ಡದು ಮಾಡಿಕೊಳ್ಳಬೇಕೆಂಬ ಇಚ್ಛೆ. ಅದರಂತೆ ಆಕೆ ಸರ್ಜರಿ ಮೂಲಕ ಭಾರೀ ಗಾತ್ರದ ಸ್ತನಗಳನ್ನು ಹೊಂದಿದ್ದು, ಇದೀಗ ಆಕೆಗೆ ಅದೇ ದೊಡ್ಡ ಸಮಸ್ಯೆಯಾಗಿ ಇದರಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಇರುವುದಾಗಿ ವರದಿಯೊಂದು ತಿಳಿಸಿದೆ.

ಶೈಲಾ ಹೆರ್ಷೈ (31) ಎಂಬಾಕೆಗೆ ಮೊದಲೇ ದೊಡ್ಡ ಗಾತ್ರದ ಸ್ತನ ಹೊಂದಿದ್ದಳು. ಆದರೆ ಆಕೆಗೆ ತನ್ನ ಸ್ತನವನ್ನು ಭಾರೀ ಗಾತ್ರ ಮಾಡಿಕೊಂಡು ಗಿನ್ನೆಸ್ ದಾಖಲೆ ನಿರ್ಮಿಸುವ ಹುಚ್ಚು ಕನಸು ಕಂಡಿದ್ದಳು. ನಂತರ ಸುಮಾರು 18 ಸರ್ಜರಿ ಮೂಲಕ ಕೃತಕವಾಗಿ ಸ್ತನವನ್ನು ದೊಡ್ಡದು ಮಾಡಿಕೊಳ್ಳುವ ಮೂಲಕ ವಿಶ್ವದ ಅತಿ ದೊಡ್ಡ ಸ್ತನದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಳು!

ಶೈಲಾ ಹೆರ್ಷೈ ಬ್ರೆಜಿಲ್‌ನಲ್ಲಿ ಜನಿಸಿದ್ದು, ಇದೀಗ ಹೂಸ್ಟನ್ ನಿವಾಸಿಯಾಗಿದ್ದಾರೆ. ಆಕೆ ಹಾಡುಗಾರ್ತಿ, ನಟಿ ಹಾಗೂ ರೂಪದರ್ಶಿ. ಅಷ್ಟೇ ಅಲ್ಲ ಪೋರ್ಚುಗೀಸ್, ಸ್ಪಾನಿಶ್, ಇಟಾಲಿಯನ್, ಚೈನೀಸ್ ಹಾಗೂ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾಳೆ. ಆದರೆ ಅತೀ ದೊಡ್ಡ ಗಾತ್ರದ ಸ್ತನ ಹೊಂದಿದ್ದ ಶೈಲಾ ಸ್ತನ ಸೋಂಕಿನಿಂದ ಬಳಲತೊಡಗಿದ್ದಳು. ಇದರಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮತ್ತೆ ಆಪರೇಷನ್ ಮಾಡುವ ಮೂಲಕ ಆಕೆಯ ಭಾರೀ ಗಾತ್ರದ ಸ್ತನದ ತೆಗೆದು, ಸಣ್ಣ ಗಾತ್ರಕ್ಕೆ ಇಳಿಸಲಾಗಿದೆ ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ.

ಅಷ್ಟಾದರೂ ಆಕೆಗೆ ಮತ್ತೆ ಭಾರೀ ಗಾತ್ರದ ಸ್ತನ ಬೇಕೆಂಬ ಇಚ್ಚೆ. ಅದಕ್ಕೆ ವೈದ್ಯರು ಒಪ್ಪುತ್ತಿಲ್ಲ ಎಂದು ನ್ಯೂಯಾರ್ಕ್ ಡೈಲಿ ನ್ಯೂಸ್ ತಿಳಿಸಿದೆ. ಸ್ತನವಿಲ್ಲದೆ ಇರುವುದು ನನಗೆ ತುಂಬಾ ಅಸಹ್ಯವಾಗುತ್ತಿರುವುದಾಗಿ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಲವತ್ತುಕೊಂಡಿರುವುದಾಗಿ ವರದಿ ಹೇಳಿದೆ.

ಒಟ್ಟಾರೆ ಸ್ತನ ಪುರಾಣದಿಂದಾಗಿಯೇ ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈಗ ಶೈಲಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಇರುವುದಾಗಿ ವರದಿ ವಿವರಿಸಿದೆ.
ಇವನ್ನೂ ಓದಿ