ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾದಲ್ಲಿ ಜೀವಭಯ: ಸಾವಿರಾರು ಮಂದಿ ಟ್ಯುನಿಷಿಯಾಕ್ಕೆ (Libya | Tunisia | Red Crescent | fled | Muammar Gaddafi | crisis,)
ಸರ್ವಾಧಿಕಾರಿ ಮೊಮ್ಮರ್ ಗಡ್ಡಾಫಿ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಲಿಬಿಯಾದ ಸುಮಾರು 10 ಸಾವಿರ ಜನರು ಟ್ಯನಿಷಿಯಾಕ್ಕೆ ಆಗಮಿಸಿದ್ದಾರೆ. ಅವರೆಲ್ಲರೂ ಈಜಿಪ್ಟಿಯನ್‌ ಪ್ರಜೆಗಳು ಎಂದು ರೆಡ್ ಕ್ರೆಸೆಂಟ್ ತಿಳಿಸಿದೆ.

ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ರಾಸ್ ಜೆಡಿರ್ ಮೂಲಕ ಟ್ಯುನಿಷಿಯಾಕ್ಕೆ ಆಗಮಿಸಿರುವುದಾಗಿ ಬಾರ್ಡರ್ ಟೌನ್‌ನ ಮೊನ್‌ಜಿ ಸ್ಲಿಮ್ ಹೇಳಿದ್ದಾರೆ.

ಅಷ್ಟೇ ಅಲ್ಲ ಕಳೆದ ಒಂದು ವಾರದಲ್ಲಿ ಸುಮಾರು 40 ಸಾವಿರ ಮಂದಿ ಇದೇ ಗಡಿಭಾಗದಿಂದ ಟ್ಯುನಿಷಿಯಾಕ್ಕೆ ಆಗಮಿಸಿದ್ದು, ಇದರಲ್ಲಿ 15 ಸಾವಿರಕ್ಕೂ ಅಧಿಕ ಈಜಿಪ್ಟಿಯನ್ ಪ್ರಜೆಗಳು ಸೇರಿದ್ದಾರೆ.

ಲಿಬಿಯಾದಲ್ಲಿ ಮೊಮ್ಮರ್ ಗಡ್ಡಾಫಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಮತ್ತೊಂದೆಡೆ ಮಿಲಿಟರಿ ಪಡೆ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕಾರ್ಯದಲ್ಲಿ ಮುಂದಾಗಿದೆ. ಆ ನಿಟ್ಟಿನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಲಿಬಿಯಾದಲ್ಲಿ ವಾಸ್ತವ್ಯ ಹೂಡಿರುವ ವಿದೇಶಿಗರು ತಮ್ಮ ದೇಶಕ್ಕೆ ವಾಪಸಾಗುತ್ತಿದ್ದಾರೆ.

ಲಿಬಿಯಾದಲ್ಲಿನ ಬಿಕ್ಕಟ್ಟಿಗೆ ಈಜಿಪ್ಟಿಯನ್‌ರು ಮತ್ತು ಟ್ಯುನಿಷಿಯನ್‌ರೇ ಕಾರಣ ಎಂದು ಗಡ್ಡಾಫಿ ಪುತ್ರ ಸೈಫ್ ಅಲ್ ಇಸ್ಲಾಮ್ ಆರೋಪಿಸಿದ್ದಾರೆ. ಇದರಿಂದಾಗಿ ಲಿಬಿಯಾದಲ್ಲಿ ಭೀತಿಯನ್ನು ಎದುರಿಸುತ್ತಿರುವ ಈಜಿಪ್ಟ್ ಪ್ರಜೆಗಳು ಟ್ಯುನಿಷಿಯಾಕ್ಕೆ ಆಗಮಿಸಿದ್ದಾರೆ ಎಂದು ರೆಡ್ ಕ್ರೆಸೆಂಟ್ ವಿವರಿಸಿದೆ.
ಇವನ್ನೂ ಓದಿ