ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಫ್ರಾನ್ಸ್‌ನಲ್ಲಿ ಏ.1 ರಿಂದ ಬುರ್ಖಾ ನಿಷೇಧ ಕಾನೂನು ಜಾರಿ (Moussa Niambele | Burqa ban in France)
PTI
ದೇಶದಲ್ಲಿ ಮುಂದಿನ ತಿಂಗಳಿನಿಂದ ಬುರ್ಖಾ ನಿಷೇಧ ಜಾರಿಗೆ ಬರಲಿದ್ದು, ಯಾವುದೇ ಮಹಿಳೆ ಬುರ್ಖಾ ಧರಿಸಿದಲ್ಲಿ ಅವಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿ ಬುರ್ಖಾ ತೆಗೆಯುವಂತೆ ಆದೇಶಿಸಲಾಗುತ್ತದೆ ಅಥವಾ ದಂಡವನ್ನು ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬುರ್ಖಾ ನಿಷೇಧ ಕಾನೂನು ಕೇವಲ ಸಾಂಕೇತಿಕವಾಗಿದೆ. ಬುರ್ಖಾ ಧರಿಸಿದ ಪ್ರತಿಯೊಬ್ಬ ಮಹಿಳೆಯನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸುವುದಿಲ್ಲ. ಅನುಮಾನ ಬಂದವರನ್ನು ಮಾತ್ರ ವಿಚಾರಣೆ ನಡೆಸುವ ಅವಕಾಶವಿದೆ.

ಆದರೆ, ಬುರ್ಖಾ ನಿಷೇಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಇಮಾಮ್, ಮುಸ್ಲಿಂ ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಫ್ರಾನ್ಸ್‌ನಲ್ಲಿ ಬುರ್ಖಾ ನಿಷೇದ ಮಸೂದೆಯನ್ನು ಮಂಡಿಸಿದಾಗ, ಬುರ್ಖಾ ಧರಿಸಿದ ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆಸಿ ಕಿರುಕುಳ ಸಾಧ್ಯತೆಗಳಿವೆ ಎಂದು ಮುಸ್ಲಿಂ ನಾಯಕರು ಅಕ್ರೋಶ ವ್ಯಕ್ತಪಡಿಸಿದ್ದರು.

ಬುರ್ಖಾ ನಿಷೇಧ ಕಾನೂನು ಜಾರಿ ಕಷ್ಟಕರವಾಗಿದ್ದು, ಮುಸ್ಲಿಂ ಮಹಿಳೆಯರು ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳಿವೆ ಎಂದು ಪ್ಯಾರಿಸ್‌ನಲ್ಲಿರುವ ಮಸೀದಿಯ ಮೌಲ್ವಿ ಮೌಸಾ ನಿಯಾಮ್‌ಬೆಲೆ ಹೇಳಿದ್ದಾರೆ.

ಮುಸ್ಲಿಂ ಮಹಿಳೆಯರು ಏಪ್ರಿಲ್ 11ರಿಂದ ಬಡಾವಣೆಗಳು, ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳು, ಆಸ್ಪತ್ರೆ, ಸರಕಾರಿ ಕಚೇರಿಗಳಲ್ಲಿ ಬುರ್ಖಾ ಧರಿಸುವಂತಿಲ್ಲ. ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು ಕಂಡುಬಂದಲ್ಲಿ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುವುದು.ಒಂದು ವೇಳೆ ಬುರ್ಖಾ ತೆಗೆಯಲು ನಿರಾಕರಿಸಿದವರಿಗೆ 208 ಡಾಲರ್ ದಂಡವನ್ನು ವಿಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವನ್ನೂ ಓದಿ