ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೈಂಗಿಕ ಕಿರುಕುಳ-ಹಿಂದೂ ಸ್ವಾಮೀಜಿ ದೋಷಿ: ಅಮೆರಿಕ ಕೋರ್ಟ್ (Hindu guru | convicted | molesting girls | Hindu ashram | US)
ಇಬ್ಬರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ಅಮೆರಿಕದಲ್ಲಿನ ಹಿಂದೂ ಆಶ್ರಮದ ಧಾರ್ಮಿಕ ಗುರುವೊಬ್ಬರು ದೋಷಿ ಎಂದು ಇಲ್ಲಿನ ಕೋರ್ಟ್ ತೀರ್ಪು ನೀಡಿದೆ.

ಇಲ್ಲಿನ ಬಾರ್ಸಾನಾ ಧಾಮ್ ಎಂಬಲ್ಲಿ ಇಬ್ಬರು ಯುವತಿಯರು ಹಾಗೂ ಹಲವು ಕುಟುಂಬಗಳ ಸದಸ್ಯರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ಆಸ್ಟಿನ್‌ ಪ್ರದೇಶದಲ್ಲಿ ಸುಮಾರು 200 ಎಕರೆ ಸ್ಥಳದಲ್ಲಿ ಈ ಆಶ್ರಮವಿದೆ. ಪ್ರಕಾಶಾನಂದಾ ಸರಸ್ವತಿ ಅಲಿಯಾಸ್ ಶ್ರೀ ಸ್ವಾಮೀಜಿ ಎಂದು ಭಕ್ತರಿಂದ ಕರೆಯಿಸಿಕೊಳ್ಳುತ್ತಿರುವ ಸ್ವಾಮೀಜಿ ಇದೀಗ ಲೈಂಗಿಕ ಕಿರುಕುಳ ಆರೋಪದಲ್ಲಿ ಆರೋಪಿಯಾಗಿದ್ದಾರೆ.

ದೇಶಾದ್ಯಂತ ಇರುವ ಹಿಂದೂ ಅಮೆರಿಕನ್ ಭಕ್ತರನ್ನು ಅಪಾರ ಪ್ರಮಾಣದಲ್ಲಿ ಒಲವು ಗಿಟ್ಟಿಸಿಕೊಂಡಿದ್ದ ಈ ಸ್ವಾಮೀಜಿ ಲೈಂಗಿಕ ಕಿರುಕುಳ ಆರೋಪದಡಿಯಲ್ಲಿ ದೋಷಿ ಎಂಬ ಸುದ್ದಿ ಹೊರಬಿದ್ದಿರುವುದು ಹಿಂದೂ ಸಮುದಾಯಕ್ಕೆ ಆಘಾತಕಾರಿ ಸುದ್ದಿಯಾಗಿ ಪರಿಣಮಿಸಿದೆ.

'ಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆಲ್ಲ ತುಂಬಾ ನಿರಾಸೆಯಾಗಿದೆ. ಸ್ವಾಮೀಜಿ ನಿರಪರಾಧಿ ಅಂತ ನಾವು ಈಗಲೂ ಭಾವಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ಇನ್ನೂ ನಿಂತಿಲ್ಲ. ಇದು ಮುಂದುವರಿಯಲಿದೆ ಎಂದು ಆಶ್ರಮದ ವಕ್ತಾರ ಅಮಾನ್ ಅಗರ್‌ವಾಲ್ ತಿಳಿಸಿದ್ದಾರೆ.

ಶ್ಯಾಮ್ ರೊಸೆ (30) ಹಾಗೂ ವೆಸ್ಲಾ ಟೊನ್ನೆಸ್ಸೆನ್ ಕಾಜಿಮೆರ್ (27) ಎಂಬ ಯುವತಿಯರು ಪ್ರಕಾಶಾನಂದ ಸರಸ್ವತಿ ವಿರುದ್ಧ ದೂರು ನೀಡಿದ್ದು, ಹಲವಾರು ವರ್ಷಗಳ (1990ರಲ್ಲಿ ಸ್ವಾಮೀಜಿ ಆಶ್ರಮ ಸ್ಥಾಪಿಸಿದ್ದರು) ಕಾಲದಿಂದ ಆಶ್ರಮಕ್ಕೆ ಬರುತ್ತಿದ್ದು, ಆ ಸಂದರ್ಭದಲ್ಲೆಲ್ಲಾ ಆತ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಈ ದೂರು 2008 ಏಪ್ರಿಲ್ ತಿಂಗಳಿನಲ್ಲಿ ದಾಖಲಾಗಿತ್ತು. ಆಗ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ಸ್ವಾಮೀಜಿಯನ್ನು 1 ಮಿಲಿಯನ್ ಡಾಲರ್ ದಂಡ ವಿಧಿಸಿ ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇವನ್ನೂ ಓದಿ