ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ ವಿರುದ್ಧ ಮಿಲಿಟರಿ ಪ್ರಯೋಗ ಬೇಡ: ರಷ್ಯಾ (Libya | military intervention | Russia | Kadhafi | US)
ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಗಡಾಫಿ ಪ್ರತಿಭಟನಾಕಾರರ ಮೇಲೆ ಮಿಲಿಟರಿ ಪಡೆ ದಾಳಿ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಬೇಕೆಂಬ ಅಮೆರಿಕದ ಒತ್ತಡವನ್ನು ರಷ್ಯಾ ತೀವ್ರವಾಗಿ ವಿರೋಧಿಸಿದೆ.

ಲಿಬಿಯಾದಲ್ಲಿ ಯಾವುದೇ ಮಿಲಿಟರಿ ಪಡೆ ಪ್ರವೇಶಿಸುವುದಕ್ಕೆ ರಷ್ಯಾದ ಸಹಮತ ಇಲ್ಲ ಎಂದು ವಿದೇಶಾಂಗ ಸಚಿವ ಸೆರ್ಗಾಯ್ ಲಾವ್ರೋವ್ ಮಂಗಳವಾರ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಲಿಬಿಯಾದಲ್ಲಿ ಯಾವುದೇ ವಿದೇಶಿ ಅಥವಾ ಮಿಲಿಟರಿ ಕಾರ್ಯಾಚರಣೆಯಿಂದ ಸಮಸ್ಯೆ ನಿವಾರಣೆಯಾಗಲಿದೆ ಎಂಬುದರಲ್ಲಿ ವಿಶ್ವಾಸವಿಲ್ಲ ಎಂದು ಸೆರ್ಗಾಯ್ ತಿಳಿಸಿರುವುದಾಗಿ ರಷ್ಯಾ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಲಿಬಿಯಾ ತನ್ನ ಸಮಸ್ಯೆಯನ್ನು ತಾನೇ ಪರಿಹರಿಸಿಕೊಳ್ಳಲಿದೆ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಗಡಾಫಿ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ, ಪ್ರತಿಭಟನಾಕಾರರ ಮೇಲೆ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸುವಂತೆ ತಾಕೀತು ಮಾಡಿತ್ತು. ಅಲ್ಲದೇ ಲಿಬಿಯಾಕ್ಕೆ ಮಿಲಿಟರಿ ಪಡೆ ಕಳುಹಿಸುವ ಯೋಜನೆ ಹಾಕಿಕೊಂಡಿರುವುದಾಗಿಯೂ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. ಜಲಮಾರ್ಗ ಮತ್ತು ಮಿಲಿಟರಿ ಕಾರ್ಯಾಚರಣೆ ನಡೆಸುವ ಬಗ್ಗೆ ಚರ್ಚೆ ನಡೆಸುವುದಾಗಿ ಅಮೆರಿಕ ಹೇಳಿತ್ತು.

ಮೊಮ್ಮರ್ ಗಡಾಫಿ ಅವರ ಮಿಲಿಟರಿ ಪಡೆ ಸರ್ವಾಧಿಕಾರಿ ಅವರ ತಾಯ್ನಾಡಿನಲ್ಲಿ ಪ್ರತಿಭಟನಾಕಾರರನ್ನು ಸೆರೆ ಹಿಡಿದು ಪ್ರಮುಖ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡ ಮೇಲೆ ಅಮೆರಿಕ ಈ ಹೇಳಿಕೆಯನ್ನು ನೀಡಿತ್ತು.
ಇವನ್ನೂ ಓದಿ