ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲೈಂಗಿಕ ಕಿರುಕುಳ: ಹಿಂದೂ ಸ್ವಾಮಿಗೆ 14 ವರ್ಷ ಜೈಲುಶಿಕ್ಷೆ (Hindu guru | sexual molestation | US | 14 years prison | Saraswati,)
ತಲೆಮರೆಸಿಕೊಂಡಿರುವ ಭಾರತೀಯ ಮೂಲದ ಸ್ವಯಂಘೋಷಿತ ದೇವಮಾನವ ಪ್ರಕಾಶಾನಂದ ಸರಸ್ವತಿ (82) ಸ್ವಾಮೀಜಿಗೆ ಇಲ್ಲಿನ ಕೋರ್ಟ್ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸ್ವಾಮೀಜಿಯ ಗೈರು ಹಾಜರಿಯಲ್ಲಿಯೇ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿ, 10 ಸಾವಿರ ಅಮೆರಿಕನ್ ಡಾಲರ್ ದಂಡವನ್ನು ವಿಧಿಸಿರುವುದಾಗಿ ವರದಿ ತಿಳಿಸಿದೆ.

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ 200 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿರುವ ಪ್ರಕಾಶಾನಂದ ಸ್ವಾಮೀಜಿ ಅವರ ಬರ್ಸನ ಧಾಮ ಆಶ್ರಮದಲ್ಲಿ ಇಬ್ಬರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಿಲ್ಲವಾಗಿತ್ತು. ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಸ್ವಾಮೀಜಿ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಿತ್ತು.

ಸೋಮವಾರ ನಿಗದಿಯಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಕಟಿಸುವ ಸಮಯದಲ್ಲಿಯೇ ಸ್ವಾಮೀಜಿ ಕೋರ್ಟ್‌ಗೆ ಗೈರು ಹಾಜರಾಗಿದ್ದರು. ಬಳಿಕ ನ್ಯಾಯಾಧೀಶರಾದ ಚಾರ್ಲ್ಸ್ ರಾಮ್‌ಸ್ಯಾ ಅವರು ಬಂಧನದ ವಾರಂಟ್ ಹಾಗೂ 1 ಮಿಲಿಯನ್ ಅಮೆರಿಕನ್ ಡಾಲರ್ ದಂಡವನ್ನೂ ವಿಧಿಸಿದ್ದರು.

ಪ್ರಕಾಶಾನಂದ ಸರಸ್ವತಿ ಸ್ವಾಮೀಜಿ 1990ರಲ್ಲಿ ದಕ್ಷಿಣ ಆಸ್ಟಿನ್‌ನಲ್ಲಿ ಬರ್ಸನ ಧಾಮ ಸ್ಥಾಪಿಸಿದ್ದರು. ಇದು ಅಮೆರಿಕದಲ್ಲಿನ ಅತಿ ದೊಡ್ಡ ಹಿಂದೂ ದೇವಾಲಯ ಕೂಡ ಆಗಿದೆ. ಭಾರತದಲ್ಲಿಯೂ ಪ್ರಕಾಶಾನಂದ ಸ್ವಾಮೀಜಿಯ ಹಲವು ಧರ್ಮಾರ್ಥ ಕಾರ್ಯ ಕೈಗೊಂಡಿದ್ದರು. ಆದರೆ ಈಗ ಆಶ್ರಮದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಯುವತಿಯರೇ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿಸುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಇವನ್ನೂ ಓದಿ