ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬ್ರಿಟನ್: ಪ್ರಿಯಕರನ ವೃಷಣವನ್ನೇ ಕಡಿದ ಪ್ರಿಯತಮೆ! (bites off | testicles | Britain | girlfriend | Maria Georgina | surgery)
ಆಕ್ರೋಶಗೊಂಡ ಪ್ರಿಯತಮೆಯೊಬ್ಬಳು ಪ್ರಿಯಕರನ ವೃಷಣವನ್ನೇ ಬಾಯಿಂದ ಕಡಿದು ಹಾಕಿರುವ ಭೀಕರ ಘಟನೆ ಉತ್ತರ ಬ್ರಿಟನ್‌ನಲ್ಲಿ ನಡೆದಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮೂಲಕ ವೃಷಣವನ್ನು ಮರುಜೋಡಿಸಲಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.

ತನ್ನ ಪ್ರಿಯಕರ ಮಾರ್ಟಿನ್ ಡೌಗ್ಲಾಸ್(45) ಮೇಲೆ ಮಾರಣಾಂತಿಕ ದಾಳಿ ನಡೆಸಿದ ಪ್ರಿಯತಮೆ ಮಾರಿಯಾ ಜಾರ್ಜಿನಾ ಟೊಪ್(43) ಆತನ ವೃಷಣವನ್ನೇ ಕಚ್ಚಿ ಕತ್ತರಿಸಿ ಹಾಕಿರುವುದಾಗಿ ದಿ ಡೈಲಿ ಮಿರರ್ ವರದಿ ಮಾಡಿದೆ.

ಘಟನೆಯಿಂದ ಗಾಬರಿಗೊಂಡ ಡೌಗ್ಲಾಸ್ ಕೂಡಲೇ ಎಮರ್ಜೆನ್ಸಿ ಸರ್ವಿಸ್‌ಗೆ ಕರೆ ಮಾಡಿದ್ದ. ಆದರೆ ಮಾರಣಾಂತಿಕ ನೋವಿನಿಂದ ಒದ್ದಾಡುತ್ತಿದ್ದ ಆತ ಏನು ಹೇಳುತ್ತಿದ್ದಾನೆ ಎಂಬುದೇ ತಮಗೆ ತಿಳಿಯಲಿಲ್ಲ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ. ತದನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ವೈದ್ಯರಿಗೆ ಕರೆ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ 43ರ ಹರೆಯದ ಮಾರಿಯಾಳನ್ನು ಬಂಧಿಸಿ, ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಆಕೆ ಯಾವ ಕಾರಣಕ್ಕಾಗಿ ಈ ರೀತಿ ದಾಳಿ ನಡೆಸಿದ್ದಾಳೆ ಎಂಬುದು ತಿಳಿದುಬಂದಿಲ್ಲ. ಡೌಗ್ಲಾಸ್ ಅವರನ್ನು ಕೂಡಲೇ ಫ್ರೀಮನ್ ಆಸ್ಪತ್ರೆಗೆ ದಾಖಲಿಸಿ, ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಿಸಲಾಗಿದೆ ಎಂದು ವರದಿ ವಿವರಿಸಿದೆ.
ಇವನ್ನೂ ಓದಿ