ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ಕೈದಿ ಜೈಲುಶಿಕ್ಷೆ ಕಡಿತಕ್ಕೆ ಜರ್ದಾರಿ ಅಂಕಿತ (Asif Ali Zardari | remaining jail term | Indian | Gopal Das | Yousuf Raza Gilani)
ಪಾಕಿಸ್ತಾನದಲ್ಲಿ 27 ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಿರುವ ಭಾರತದ ಗೋಪಾಲ್ ದಾಸ್‌ನ ಜೈಲುಶಿಕ್ಷೆಯ ಪ್ರಮಾಣವನ್ನು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಭಾನುವಾರ ಕಡಿಮೆಗೊಳಿಸಲು ಅಂಕಿತ ಹಾಕಿದ್ದು, ಮಾರ್ಚ್ 30ರಂದು ಮೊಹಾಲಿಯಲ್ಲಿ ನಡೆಯಲಿರುವ ಭಾರತ-ಪಾಕ್ ನಡುವಿನ ಸೆಮಿಫೈನಲ್ ಹಣಾಹಣಿಗೆ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಆಗಮಿಸುವ ಮುನ್ನ ಈ ಮಹತ್ವದ ಬೆಳವಣಿಗೆ ನಡೆದಿದೆ.

ಮಾನವೀಯತೆ ನೆಲೆಯಲ್ಲಿ ಗೋಪಾಲ್ ದಾಸ್ ಉಳಿದ ಶಿಕ್ಷೆಯ ಪ್ರಮಾಣವನ್ನು ಜರ್ದಾರಿ ಅವರು ಕಡಿತ ಮಾಡಿರುವುದಾಗಿ ಅಧ್ಯಕ್ಷರ ವಕ್ತಾರ ಫಾರ್ತುಲ್ಲಾ ಬಾಬಾರ್ ತಿಳಿಸಿದ್ದಾರೆ.

ದಾಸ್ ಶಿಕ್ಷೆಯ ಕ್ಷಮಾದಾನದ ಕುರಿತಂತೆ ಭಾರತದ ಸರ್ವೋಚ್ಚನ್ಯಾಯಾಲಯ ಪಾಕಿಸ್ತಾನ ಸರಕಾರಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಗಿಲಾನಿ ಅವರು ಅಧ್ಯಕ್ಷರಿಗೆ ನೀಡಿರುವ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ವಿವರಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಸುಪ್ರೀಂಕೋರ್ಟ್‌ ದ್ವಿ ಸದಸ್ಯಪೀಠದ ನ್ಯಾಯಾಧೀಶರು, ದಾಸ್‌ ಅವರ ಉಳಿದ ಶಿಕ್ಷೆಯ ಪ್ರಮಾಣವನ್ನು ಕಡಿತ ಮಾಡಿ ಬಿಡುಗಡೆಗೊಳಿಸುವಂತೆ ಪಾಕಿಸ್ತಾನ ಸರಕಾರಕ್ಕೆ ಮನವಿ ಮಾಡಿದ್ದರು.

ತಮ್ಮ ಸಹೋದರರನ ಬಿಡುಗಡೆ ಕುರಿತಂತೆ ಅಪೆಕ್ಸ್ ಕೋರ್ಟ್ ಪಾಕಿಸ್ತಾನಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಆನಂದ್ ವೀರ್ ಸಲ್ಲಿಸಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ಈ ಮನವಿ ಮಾಡಿತ್ತು.

1984ರಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಪ್ರವೇಶಿಸಿದ ಆರೋಪದ ಮೇಲೆ ದಾಸ್ ಅವರನ್ನು ಪಾಕಿಸ್ತಾನದ ಭದ್ರತಾ ಪಡೆ ಬಂಧಿಸಿರುವುದಾಗಿ ದಾಸ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆದರೆ ಪಾಕಿಸ್ತಾನದ ದಾಖಲೆಗಳ ಪ್ರಕಾರ 1987ರ ಜೂನ್‌ನಲ್ಲಿ ದಾಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಇವನ್ನೂ ಓದಿ