ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಾಂಗರೂ ಕಿರಿಕ್; ಹಿಂದೂ ದೇವಾಲಯದ ಮೇಲೆ ದಾಳಿ (Australia | Hindu temple | attacked | New South Wales | shots | gunmen,)
ಜನಾಂಗೀಯ ಹಲ್ಲೆ, ಹತ್ಯೆಯ ನಂತರ ಆಸ್ಟ್ರೇಲಿಯಾದಲ್ಲಿ ಇದೀಗ ಹಿಂದೂಗಳ ಹಳೆಯ ದೇವಾಲಯವೊಂದರ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ಗುಂಡು ಹಾರಿಸಿರುವ ಘಟನೆ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದಿದ್ದು, ಇದರಿಂದ ಹಿಂದೂ ಸಂಘಟನೆಯ ಸದಸ್ಯರು ಆತಂಕಗೊಂಡಿರುವುದಾಗಿ ವರದಿಯೊಂದು ತಿಳಿಸಿದೆ.

ನ್ಯೂ ಸೌತ್ ವೇಲ್ಸ್‌ನಲ್ಲಿರುವ ಶ್ರೀಮಂದಿರ್ ಆವ್‌ಬುರ್ನ್‌ ಸುಮಾರು ಮೂರು ದಶಕಗಳಷ್ಟು ಹಳೆಯದಾಗಿದೆ. ಮಾರ್ಚ್ 19ರ ರಾತ್ರಿ ಆಗಮಿಸಿದ್ದ ಇಬ್ಬರು ಮಸುಕುಧಾರಿ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.

ದೇವಾಲಯಕ್ಕೆ ದಾಳಿ ನಡೆಸುತ್ತಿರುವ ಘಟನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಅಪರಿಚಿತರು ಹಾರಿಸಿದ ಗುಂಡಿನ ದಾಳಿಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದರೆ ಈ ಘಟನೆ ದೇವಾಲಯದ ಪುರೋಹಿತರು ಮತ್ತು ಭಕ್ತಾದಿಗಳಿಗೆ ಹೆಚ್ಚಿನ ಆತಂಕ ತಂದೊಡ್ಡಿದೆ ಎಂದು ಹೇಳಿದೆ.

ದೇವಾಲಯದ ಮೇಲಿನ ದಾಳಿ ಘಟನೆ ಕುರಿತಂತೆ ಡಿಟೆಕ್ಟಿವ್ಸ್ ಹಿಂದೂ ಸಮುದಾಯದ ನೆರವಿನೊಂದಿಗೆ ತನಿಖೆ ನಡೆಸುತ್ತಿರುವುದಾಗಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ತಿಳಿಸಿದೆ. ಸಿಸಿ ಟಿವಿಯಲ್ಲಿನ ಫೂಟೇಜ್ ಅನ್ನು ಪೊಲೀಸರಿಗೆ ನೀಡಲಾಗಿದೆ, ಆದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಸಿಡ್ನಿಯ ನಿವಾಸಿ ರೋಹಿತ್ ರೆವೋ ತಿಳಿಸಿದ್ದಾರೆ.
ಇವನ್ನೂ ಓದಿ