ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಾಲಿ ಸ್ಫೋಟದ ಉಗ್ರನ ಸೆರೆ- ನಮ್ಮ ಸಾಧನೆ: ಐಎಸ್ಐ (Bali bomb | Umar Patek | al Qaeda | ISI | Indonesia,)
ಬಾಲಿ ದ್ವೀಪದ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್, ಈವರೆಗೂ ತಲೆತಪ್ಪಿಸಿಕೊಂಡಿದ್ದ ಅಲ್ ಖಾಯಿದಾ ಸಂಪರ್ಕದ ಜೆಮಾ ಇಸ್ಲಾಮಿಯಾ ಸಂಘಟನೆಯ ಉಮರ್ ಪಾಟೆಕ್‌ನ ಬಂಧನದ ಹಿಂದೆ ಪಾಕಿಸ್ತಾನದ ಐಎಸ್ಐ ಶ್ರಮ ಇರುವುದಾಗಿ ಐಎಸ್ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಮರ್ ಪಾಟೆಕ್‌ನನ್ನು ನಾವು ಕೆಲವು ದಿನಗಳ ಹಿಂದೆಯೇ ಬಂಧಿಸಿದ್ದೇವು. ಇದೀಗ ಶಿಷ್ಟಾಚಾರದಂತೆ ಆಂತರಿಕ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸಂಬಂಧಿತ ಇಲಾಖೆಗಳು ಮಾತುಕತೆ ನಡೆಸಿ ಆರೋಪಿಯನ್ನು ಇಂಡೋನೇಷ್ಯಾಕ್ಕೆ ಒಪ್ಪಿಸುವುದಾಗಿ ಅಧಿಕಾರಿ ವಿವರಿಸಿದ್ದಾರೆಂದು ದಿ ನ್ಯೂಸ್ ವರದಿ ಮಾಡಿದೆ.

ಉಗ್ರ ಉಮರ್‌ನನ್ನು ಹಲವಾರು ಗುಪ್ತಚರ ಇಲಾಖೆಯ ಸಹಕಾರದೊಂದಿಗೆ ಸೆರೆ ಹಿಡಿಯಲಾಗಿದೆ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದರಲ್ಲಿ ಬೇರಾವ ಗುಪ್ತಚರ, ಅಂತಾರಾಷ್ಟ್ರೀಯ ಇಲಾಖೆಯ ಶ್ರಮ ಇಲ್ಲ. ಇದು ಸಂಪೂರ್ಣವಾಗಿ ಐಎಸ್ಐ ಸಾಧನೆಯಾಗಿದೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.

2002ರಲ್ಲಿ ಇಂಡೋನೇಷ್ಯಾದ ಬಾಲಿ ಬಾಂಬ್ ಸ್ಫೋಟದಲ್ಲಿ 200 ಮಂದಿ ಸಾವನ್ನಪ್ಪಿದ್ದರು. ಇದರಲ್ಲಿ 80 ಮಂದಿ ಆಸ್ಟ್ರೇಲಿಯಾ ಮತ್ತು 8 ಮಂದಿ ಅಮೆರಿಕ ಪ್ರಜೆಗಳು ಸೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಇಂಡೋನೇಷ್ಯಾದ ಮೋಸ್ಟ್ ವಾಟೆಂಟ್ ಉಗ್ರ.
ಇವನ್ನೂ ಓದಿ