ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಹಣ ಸಂಗ್ರಹ; ಬ್ರೆಜಿಲ್‌ಗೂ ಕಾಲಿಟ್ಟ ಅಲ್ ಖಾಯಿದಾ ಉಗ್ರರು! (Brazil | Al-Qaida | planning attacks | Shia Muslim | United States)
ಜಗತ್ತಿನ ಹಲವೆಡೆ ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿರುವ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆ ಇದೀಗ ಬ್ರೆಜಿಲ್‌ನಲ್ಲಿ ಠಿಕಾಣಿ ಹೂಡಿದ್ದು, ಹಣ ಸಂಗ್ರಹಣೆ ಮತ್ತು ನೂತನ ಸದಸ್ಯರ ನೇಮಕಾತಿಯಲ್ಲಿ ತೊಡಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.

ವೆಜಾ ಮ್ಯಾಗಜಿನ್‌ನ ಆನ್‌ಲೈನ್ ಎಡಿಷನ್‌ನಲ್ಲಿ ಈ ಸುದ್ದಿ ಪ್ರಕಟಗೊಂಡಿದ್ದು, ದಕ್ಷಿಣ ಅಮೆರಿಕನ್ ದೇಶದಲ್ಲಿ ಅಲ್ ಖಾಯಿದಾ ಜತೆ ಸುಮಾರು 20 ಮಂದಿ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ ಲೆಬನಾನ್‌ನ ಷಿಯಾ ಮುಸ್ಲಿಮ್ ಸಂಘಟನೆಯಾದ ಹಿಜ್ಬುಲ್ಲಾ, ಪ್ಯಾಲೆಸ್ತೇನ್ ಸಂಘಟನೆಯಾದ ಹಮಾಸ್ ಹಾಗೂ ಇನ್ನಿತರ ಎರಡು ಸಂಘಟನೆಗಳು ರಹಸ್ಯವಾಗಿ ಕಾರ್ಯಾಚರಿಸುತ್ತಿರುವುದಾಗಿ ಹೇಳಿದೆ.

ತಮ್ಮ ಭಯೋತ್ಪಾದನಾ ಸಂಘಟನೆಯ ಬಲವರ್ಧನೆಗಾಗಿ ಹಣಕಾಸು ಸಂಗ್ರಹಣೆಗಾಗಿ ಅವು ವಿದೇಶಿ ನೆಲದಲ್ಲಿ ಕಾರ್ಯಾಚರಿಸುತ್ತಿರುವುದಾಗಿ ವರದಿ ಆರೋಪಿಸಿದೆ. ಆದರೆ ಈ ಬಗ್ಗೆ ಬ್ರಿಜಿಲ್ ಪೊಲೀಸರಾಗಲಿ ಹಾಗೂ ಅಮೆರಿಕದ ಎಫ್‌ಬಿಐ ಅಧಿಕಾರಿಗಳು ಯಾವುದೇ ನಿಖರ ಮಾಹಿತಿ ನೀಡಿಲ್ಲ ಎಂದು ವಿವರಿಸಿದೆ.

ಏತನ್ಮಧ್ಯೆ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳು ಅಮೆರಿಕದ ಗಡಿಭಾಗವಾದ ಬ್ರೆಜಿಲ್, ಪೆರುಗ್ವೆ ಹಾಗೂ ಅರ್ಜೈಂಟೀನಾಗಳಲ್ಲಿ ಕಾರ್ಯಾಚರಿಸುತ್ತಿರುವುದಾಗಿ ಅಮೆರಿಕ ಹೇಳಿದೆ.
ಇವನ್ನೂ ಓದಿ