ಭಾರತೀಯ ವಿದ್ಯಾರ್ಥಿಗಳಿಗಾಗಿ ಹಿಂದಿ ವೆಬ್‌ಸೈಟ್ ತೆರೆದ ಆಸೀಸ್
ನವದೆಹಲಿ, ಶುಕ್ರವಾರ, 15 ಏಪ್ರಿಲ್ 2011( 17:10 IST )
ಆಸ್ಟ್ರೇಲಿಯಾದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳ ನೆರವಿಗಾಗಿ ಆಸ್ಟ್ರೇಲಿಯಾ ಸರಕಾರವು ಹಿಂದಿಯಲ್ಲಿಯೇ ಅಂತರ್ಜಾಲ ತಾಣವೊಂದಕ್ಕೆ ಚಾಲನೆ ನೀಡಿದೆ. ಆ ಮೂಲಕ ಇದೇ ಮೊದಲ ಬಾರಿಗೆ ವಿದೇಶ ಸರಕಾರವೊಂದು ಹಿಂದಿಯಲ್ಲಿ ವೆಬ್‌ಸೈಟ್ ಆರಂಭಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಸ್ಟಡಿ ಮೆಲ್ಬೋರ್ನ್' ವೆಬ್ ತಾಣ ಇನ್ನು ಮುಂದೆ ಹಿಂದೆಯಲ್ಲೂ 'www.studymelbourne.vic.gov.au/hindi' ಲಭಿಸಲಿದೆ.
ಇದು ವಿದೇಶಿ ಸರಕಾರವು ಹಿಂದಿಯಲ್ಲಿ ಆರಂಭಿಸಿರುವ ಮೊದಲ ಅಂತರ್ಜಾಲ ತಾಣ. ಆ ಮೂಲಕ ವಿಕ್ಟೋರಿಯಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಹಾಗೂ ಹೆತ್ತರಿವರಿಗೆ ಮಾತೃಭಾಷೆಗಳಲ್ಲಿಯೇ ಮಾಹಿತಿ ಒದಗಿಸುವ ಗುರಿಯನ್ನು ಆಸೀಸ್ ಸರಕಾರ ಹೊಂದಿದೆ.
ವಿಕ್ಟೋರಿಯಾ ಯುನಿರ್ಸಿಟಿ ಹಾಗೂ ಸೌಲಭ್ಯಗಳ ಬಗ್ಗೆ ಅರಿಯಲು ಈ ವೆಬ್‌ಸೈಟ್ ಮತ್ತಷ್ಟು ನೆರವಾಗಲಿದೆ. ಆಸೀಸ್‌ನಲ್ಲಿ ಪದೇ ಪದೇ ಭಾರತೀಯ ವಿದ್ಯಾರ್ಥಿಗಳ ಮೇಲೆ ಜನಾಂಗೀಯ ದಾಳಿ ನಡೆಯುತ್ತಿರುವ ಹಿನ್ನಲೆಯಲ್ಲಿ ಹಿಂದಿಯಲ್ಲಿಯೇ ಅಧಿಕೃತ ವೆಬ್‌ಸೈಟನ್ನು ತೆರೆದುಕೊಂಡಿದೆ.