ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ಗೆ ಮರಳುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮುಶ್ರರಫ್
ಪಾಕಿಸ್ತಾನಕ್ಕೆ ಹಿಂತಿರುಗಲು ನಿರ್ಧರಿಸಿರುವ ತನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಮಿಲಿಟರಿ ಸರ್ವಾಧಿಕಾರಿ ಪರ್ವೇಜ್ ಮುಶ್ರರಫ್ ಸ್ಪಷ್ಟ ಮಾತುಗಳಲ್ಲಿ ನುಡಿದಿದ್ದಾರೆ.

ತಾಲಿಬಾನ್ ಮತ್ತು ಇತರ ಉಗ್ರಗಾಮಿ ಸಂಘಟನೆಗಳಿಂದ ಜೀವ ಬೆದರಿಕೆ ಇರುವುದರ ಹೊರತಾಗಿಯೂ ಇಂತಹದೊಂದು ದಿಟ್ಟ ಹೇಳಿಕೆಯನ್ನು ಮುಶ್ರರಫ್ ನೀಡಿದ್ದು, ಸಕ್ರಿಯ ರಾಜಕಾರಣದಲ್ಲಿ ಮರಳುವ ಸೂಚನೆ ನೀಡಿದ್ದಾರೆ.

ಲಾಹೋರ್‌ನಲ್ಲಿ ನೆರೆದಿದ್ದ ತನ್ನ ಆಲ್ ಪಾಕಿಸ್ತಾನ ಮುಸ್ಲಿಂ ಲೀಗ್ ಪಾರ್ಟಿಯನ್ನು ಉದ್ದೇಶಿಸಿ ವಿಡಿಯೋ ಕಾಲಿಂಗ್ ಮೂಲಕ ಸಂವಾದ ನಡೆಸಿದ್ದ ಮುಶ್ರರಫ್, ಸ್ವದೇಶಕ್ಕೆ ಮರಳುವುದನ್ನು ಖಚಿತಪಡಿಸಿದ್ದಾರೆ. ಹಾಗೆಯೇ ಇದರಿಂದಾಗಿ ಎದುರಾಗುವ ಎಲ್ಲ ವಿಪತ್ತುಗಳನ್ನು ಎದುರಿಸಲು ಸಿದ್ಧ ಎಂದಿದ್ದಾರೆ.

ನಾನು ಹಲವು ಬಾರಿ ನಿಕಟ ದಾಳಿಗಳಿಂದ ಪಾರಾಗಿದ್ದೇನೆ. ಆದ್ದರಿಂದ ಯಾವುದೇ ಭಯ ನನ್ನಲಿಲ್ಲ. ದೇಶದ ಜನತೆಗಾಗಿ ಒಳ್ಳೆಯ ಕೆಲಸ ಮಾಡಬೇಕೆಂಬುದು ನನ್ನ ಇರಾದೆಯಾಗಿದೆ ಎಂದರು.
ಇವನ್ನೂ ಓದಿ