ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಂಬೈ ದಾಳಿ ಆರೋಪ ಸಾಬೀತುಪಡಿಸಲು ಸಾಧ್ಯವಿಲ್ಲ: ಹಫೀಜ್ (Hafiz Saeed | JuD | Mumabai Terror attack | Pakistan)
ಮುಂಬೈನಲ್ಲಿ 2008 ನವೆಂಬರ್ 26ರಂದು ಸಂಭವಿಸಿದ ಭಯೋತ್ಪಾದನೆ ದಾಳಿಗಳ ಹಿಂದೆ ತಮ್ಮ ಸಂಘಟನೆಯ ಕೈವಾಡವಿಲ್ಲ ಎಂದು ಪ್ರಮುಖ ಆರೋಪಿ ಆಗಿರುವ ನಿಷೇಧಿತ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್‌ ಹೇಳಿಕೊಂಡಿದ್ದು, ಪಾಕಿಸ್ತಾನ ಸರಕಾರ ಭಾರತ ಮತ್ತು ಅಮೆರಿಕಾ ದೇಶಗಳ ಒತ್ತಡಕ್ಕೆ ಸಂಪೂರ್ಣವಾಗಿ ಶರಣಾಗಿದೆ ಎಂದು ಆಪಾದಿಸಿದ್ದಾರೆ.

ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಭಾರತ 400 ಪುಟಗಳ ವರದಿಯನ್ನು ಪಾಕಿಸ್ತಾನ ಸರಕಾರಕ್ಕೆ ಹಸ್ತಾಂತರಿಸಿತ್ತು. ಆದರೆ ತಮ್ಮಕೈವಾಡವನ್ನು ಸಾಬೀತುಪಡಿಸಲು ವಿಫಲವಾಗಿದ್ದು, ಮುಂಬೈ ದಾಳಿಯಲ್ಲಿ ಜಮಾತ್ ಉದ್ ದವಾ ಮೇಲಿನ ಆರೋಪ ಸಾಬೀತುಪಡಿಸಲು ಭಾರತದಿಂದ ಸಾಧ್ಯವಿಲ್ಲ ಎಂದು ಡಾನ್ ನ್ಯೂಸ್‌ಗೆ ಸಯೀದ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಲಷ್ಕರ್-ಇ-ತೋಯ್ಬಾ ಜತೆ ತಮ್ಮ ಸಂಘಟನೆಗೆ ಯಾವುದೇ ರೀತಿಯ ನಂಟಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

166 ಜನರ ಸಾವಿಗೆ ಕಾರಣವಾಗಿರುವ ಮುಂಬೈ ದಾಳಿಯ ಪ್ರಮುಖ ಆರೋಪಿ ಸಯೀದ್ ವಿರುದ್ಧ ತನ್ನ ಬಳಿ ಸ್ಪಷ್ಟ ಸಾಕ್ಷ್ಮಧಾರವಿದೆ ಎಂದು ಭಾರತ ಹೇಳಿಕೂಳ್ಳುತ್ತಲೇ ಬಂದಿವೆ. ಆದರೆ ಪುರಾವೆಗಳು ಸಾಕಾಗುತ್ತಿಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ.

ಭಾರತದ ನಿಲುವನ್ನು ಸಮರ್ಥಿಸಲು ಪಾಕಿಸ್ತಾನ ಆಂತರಿಕ ಸಚಿವರು ಕೂಡಾ ಯತ್ನಿಸಿದರು. ಆದರೆ ಇದರಿಂದ ಭಾರತ ಲಾಭ ಪಡೆಯತ್ತಿದೆ. ಈಗ ಅಮೆರಿಕಾ ಕೂಡಾ ಭಾರತದ ಪರ ಮಾತನಾಡುತ್ತಿದೆ ಎಂದು ಸಯೀದ್ ಆಪಾದಿಸಿದ್ದಾರೆ.
ಇವನ್ನೂ ಓದಿ