ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ದುಬೈ-ವೇಶ್ಯಾವಾಟಿಕೆ ಜಾಲ; ಭಾರತೀಯರಿಗೆ ಜೈಲುಶಿಕ್ಷೆ (Dubai | sex racket | Indians jailed | Bahrain | prostitution | court)
ಬಹರೈನ್‌ನಲ್ಲಿ ವೇಶ್ಯಾವೃತ್ತಿ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಭಾರತೀಯರಿಗೆ ಇಲ್ಲಿನ ನ್ಯಾಯಾಲಯ ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 19 ಮಂದಿ ಪುರುಷರು ಮತ್ತು ಮಹಿಳೆಯರು ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿರುವುದಾಗಿಮಾಧ್ಯಮದ ವರದಿಯೊಂದು ತಿಳಿಸಿದೆ.

ಅಲ್ಲದೇ ವೇಶ್ಯಾವೃತ್ತಿ ನಡೆಸಿದ ಆರೋಪದಲ್ಲಿ ನ್ಯಾಯಾಲಯ ಸುಮಾರು ಒಂಬತ್ತು ಮಂದಿ ಭಾರತೀಯ ಮಹಿಳೆಯರಿಗೆ ತಲಾ ಎರಡು ವರ್ಷಗಳ ಜೈಲುಶಿಕ್ಷೆ ನೀಡಿರುವುದಾಗಿ ಗಲ್ಫ್ ಡೈಲಿ ನ್ಯೂಸ್ ವಿವರಿಸಿದೆ. ಶಿಕ್ಷೆಯನ್ನು ಅನುಭವಿಸಿದ ನಂತರ ಆರೋಪಿತ ಪುರುಷರು ಮತ್ತು ಮಹಿಳೆಯರನ್ನು ದೇಶದಿಂದ ಗಡಿಪಾರು ಮಾಡಲಾಗುವುದೆಂದು ಹೇಳಿದೆ.

ಇಲ್ಲಿನ ಮನಾಮಾದಲ್ಲಿನ ಕಟ್ಟಡವೊಂದರಲ್ಲಿ ವೇಶ್ಯಾವೃತ್ತಿ ಜಾಲ ನಡೆಸುತ್ತಿರುವ ಖಚಿತ ಮಾಹಿತಿಯನ್ನು ಪೊಲೀಸರು ಪಡೆದಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಅವರನ್ನೆಲ್ಲ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇವನ್ನೂ ಓದಿ