ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೋಸ್ಟ್ ವಾಂಟೆಡ್ ಕ್ರಿಮಿನಲ್: ಲಾಡೆನ್ ನಂತ್ರ ದಾವೂದ್ ಸರದಿ? (most wanted criminal | Dawood Ibrahim | al Qaeda | Osama bin Laden)
PTI
ವಾಣಿಜ್ಯ ನಗರಿ ಮುಂಬೈ ಸರಣಿ ಸ್ಫೋಟದ ಪ್ರಮುಖ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜಗತ್ತಿನ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪಟ್ಟಿಯ ಎರಡನೇ ಸ್ಥಾನದಲ್ಲಿದ್ದಾನೆ ಎಂದು ದಿ ಗಾರ್ಡಿಯನ್ ಪತ್ರಿಕೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

1993ರಲ್ಲಿ ಭಾರತವನ್ನೇ ಬೆಚ್ಚಿ ಬೀಳಿಸಿದ್ದ ಸರಣಿ ಸ್ಫೋಟದ ಪ್ರಮುಖ ವ್ಯಕ್ತಿ ದಾವೂದ್ ಇಬ್ರಾಹಿಂ. ಅಲ್ ಖಾಯಿದಾ ಮುಖಂಡ ಒಸಾಮಾ ಬಿನ್ ಲಾಡೆನ್ ಅಮೆರಿಕ ಸಿಐಎ ವಿಶೇಷ ಪಡೆಯ ದಾಳಿಯಲ್ಲಿ ಹತನಾದ ನಂತರ ದಾವೂದ್ ಎರಡನೇ ಸ್ಥಾನದಲ್ಲಿದ್ದಾನೆ. ಆತನೂ ಕೂಡ ಪಾಕಿಸ್ತಾನದಲ್ಲಿಯೇ ಠಿಕಾಣಿ ಹೂಡಿರುವ ಸಾಧ್ಯತೆ ಇರುವುದಾಗಿ ವರದಿ ತಿಳಿಸಿದೆ.

ದಾವೂದ್ ಇಬ್ರಾಹಿಂ ಐದು ಸಾವಿರ ಅಪರಾಧ ಸಂಘಟನೆಗಳ ಜತೆ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದಾನೆ. ದಾವೂದ್‌ ಇಬ್ರಾಹಿಂಗೂ ಅಲ್ ಖಾಯಿದಾ ಸಂಘಟನೆ ಜತೆ ಸಂಪರ್ಕ ಇರುವ ಬಗ್ಗೆಯೂ ಅಮೆರಿಕ ಈ ಹಿಂದೆ ಹೇಳಿತ್ತು.

ಡಿ ಕಂಪನಿ ರೂವಾರಿಯಾಗಿರುವ ದಾವೂದ್ ಇಬ್ರಾಹಿಂ ಕೂಡ ಮಾದಕ ವಸ್ತು ಸಾಗಾಟ ಜಾಲದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾನೆ. ಅಲ್ ಖಾಯಿದಾ ಸಂಘಟನೆಯಂತೆಯೇ ಈತನೂ ಕೂಡ ತನ್ನ ಸಂಪರ್ಕ ಜಾಲವನ್ನು ವಿಸ್ತರಿಸಿಕೊಂಡಿರುವುದಾಗಿ ಪತ್ರಿಕೆ ವಿವರಿಸಿದೆ.

1993ರಲ್ಲಿ ಸಂಭವಿಸಿದ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ. ಘಟನೆಯಲ್ಲಿ 257 ಮಂದಿ ಸಾವನ್ನಪ್ಪಿದ್ದರು. ಒಸಾಮಾ ಬಿನ್ ಲಾಡೆನ್ ನಂತರ ದಾವೂದ್ ಎರಡನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೋದ ಡ್ರಗ್ ಮಾಫಿಯಾದ ರೂವಾರಿ ಜಾಕಿನ್ ಎಲ್ ಚಾಪೋ ಗುಜ್ಮಾನ್ ಜಗತ್ತಿನ ಮೂರನೇ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿದ್ದಾನೆ.
ಇವನ್ನೂ ಓದಿ