ಅಲ್-ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಹತ್ಯೆಯ ನಂತರ 100ರಷ್ಟು ಉಗ್ರರಿಂದ ದೇಶದೊಳಗೆ ಒಳನುಸುಳಲು ಸಂಚು ನಡೆಯುತ್ತಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಲಭಿಸಿದೆ.
ಉಗ್ರರಿಂದ ಒಳನುಸುಳುವ ಸಂಚಿನ ಹಿನ್ನಲೆಯಲ್ಲಿ ಭಾರತ ಗಡಿ ನಿಯಂತ್ರಣ ರೇಖೆಯಲ್ಲಿ ಬಿಗು ಭದ್ರತೆ ಕೈಗೊಳ್ಳಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಭಾರತೀಯ ಸೇನೆ ಎಲ್ಲ ರೀತಿಯಲ್ಲೂ ಕಟ್ಟೆಚ್ಚರವನ್ನು ವಹಿಸುತ್ತಿದೆ.
ಮತ್ತೊಂದೆಡೆ ಪಾಕಿಸ್ತಾನ ಗಡಿಯಲ್ಲೂ ಹೈ ಅಲರ್ಟ್ ಘೋಷಿಸಲಾಗಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ ಪಹರೆ ಬಿಗುಗೊಳಿಸಿದೆ.
ಲಾಡೆನ್ ಹತ್ಯೆಯ ನಂತರ ಅಲ್-ಖೈದಾ ಉಗ್ರಗಾಮಿ ಸಂಘಟನೆಯು ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಸೇನೆಗೆ ಮಾಹಿತಿ ಲಭಿಸಿದೆ.
ಅಲ್-ಖೈದಾ ಕಚೇರಿಯಾಗಿದ್ದ ಲಾಡೆನ್ ಮನೆ... ಮತ್ತೊಂದೆಡೆ ಅಬೊಟೊಬಾದ್‌ನಲ್ಲಿದ್ದ ತನ್ನ ಅಡಗುತಾಣವನ್ನು ಅಲ್-ಖೈದಾ ಕಚೇರಿಯನ್ನಾಗಿ ಲಾಡೆನ್ ಬಳಸಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ. ಲಾಡೆನ್ ಹತ್ಯೆಯ ನಂತರ ಅವರು ವಾಸಿಸುತ್ತಿದ್ದ ಮನೆಯಿಂದ ವಶಪಡಿಸಲಾದ ಹಲವಾರು ದಾಖಲೆಗಳಿಂದ ಈ ಮಾಹಿತಿಯು ಬಹಿರಂಗವಾಗಿದೆ.