ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಿಕಿನಿಯಲ್ಲಿ ದೇವತೆಯ ಚಿತ್ರ; ಕ್ಷಮೆಯಾಚಿಸಿದ ಕಂಪೆನಿ (Swimwear firm | Goddess pics | Goddess Lakshmi | Lisa Blue Swimwear)
ಬಿಕಿನಿ ಫ್ಯಾಶನ್ ಡ್ರೆಸ್‌ನಲ್ಲಿ ಹಿಂದೂ ದೇವತೆಯ ಚಿತ್ರಗಳನ್ನು ಛಾಪಿಸುವ ಮೂಲಕ ಭಾರಿ ವಿವಾದಕ್ಕೊಳಗಾಗಿದ್ದ ಆಸ್ಟ್ರೇಲಿಯಾದ ಸ್ವಿಮ್‌ ಸೂಟ್ ಲೇಬಲ್ ಕಂಪೆನಿಯು ಕೊನೆಗೂ ತಮ್ಮ ವರ್ತನೆಗೆ ಕ್ಷಮೆಯಾಚಿಸಿದೆ.

ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವುದು ತೀವ್ರ ಖೇದಕರ ಸಂಗತಿ ಎಂದು ಹೇಳಿರುವ ಸಂಸ್ಥೆಯು ಲಿಸಾ ಬ್ಲೂ ಸ್ವಿಮ್‌ವೇರ್ ಫ್ಯಾಶನ್ ವೀಕ್‌ನಲ್ಲಿ ಇದರ ಪ್ರದರ್ಶನವಾಗದು ಎಂದು ಖಾತ್ರಿಪಡಿಸಿದೆ.

ಮಾಡೆಲ್‌ಗಳ ಒಳ ಉಡುಪುಗಳಲ್ಲಿ ಹಿಂದೂ ದೇವತೆಯಾದ ಲಕ್ಷ್ಮಿಯ ಚಿತ್ರವನ್ನು ಛಾಪಿಸಲಾಗಿತ್ತು. ಇಂತಹ ಸ್ವಿಮ್‌ಸೂಟ್ ಧರಿಸಿದ್ದ ರೂಪದರ್ಶಿಗಳು ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಇದರ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಇದೀಗ ಖೇದ ವ್ಯಕ್ತಪಡಿಸಿರುವದ ಸ್ವಿಮ್‌ಸೂಟ್ ಕಂಪೆನಿಯು ವಿಶ್ವದ ಯಾವುದೇ ಕಡೆ ಈ ಮಾದರಿಯ ವಸ್ತ್ರಗಳ ಮಾರಾಟ ನಡೆಯದು ಎಂದು ತಿಳಿಸಿದೆ.
ಇವನ್ನೂ ಓದಿ