ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸೀಸ್ ಭೂಪಟ: ಜಮ್ಮು, ಅರುಣಾಚಲ ಭಾರತಕ್ಕೆ ಸೇರಿಲ್ಲ! (Arunachal | Jammu and Kashmir | Arunachal Pradesh | Oz govt omits)
ಭಾರತೀಯರ ಮೇಲೆ ಜನಾಂಗೀಯ ಹಲ್ಲೆ ನಡೆಸುವ ಮೂಲಕ ವಿವಾದಕ್ಕೆ ಸಿಲುಕಿಕೊಂಡಿದ್ದ ಆಸ್ಟ್ರೇಲಿಯಾ ಸರಕಾರ ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಭಾರತೀಯ ಭೂಪಟದಲ್ಲಿ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಕೈಬಿಟ್ಟಿದ್ದು, ಇದನ್ನು ಖಂಡಿಸಿ ಇಲ್ಲಿನ ಭಾರತೀಯ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಭಾರತದ ಭೂಪಟದಿಂದ ಜಮ್ಮು-ಕಾಶ್ಮೀರ, ಅರುಣಾಚಲ ಪ್ರದೇಶವನ್ನು ಹೊರಗಿಟ್ಟಿರುವುದನ್ನು ಖಂಡಿಸಿ ಭಾರತೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತುಕೊಂಡ ಆಸ್ಟ್ರೇಲಿಯಾ ಸರಕಾರ, ಭೂಪಟದಲ್ಲಿ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದು, ಅದನ್ನು ಅದನ್ನು ವೆಬ್‌ಸೈಟ್‌ನಿಂದ ತೆಗೆದುಹಾಕುವುದಾಗಿ ತಿಳಿಸಿದೆ.

ನಾವು ಪ್ರಕಟಿಸಿರುವ ಭೂಪಟ ತಪ್ಪಾಗಿದೆ, ಅಲ್ಲದೇ ನಾವೀಗ ಅದನ್ನು ವೆಬ್‌ಸೈಟ್‌ನಿಂದ ತೆಗೆದುಹಾಕುತ್ತೇವೆ ಎಂದು ದೆಹಲಿಯಲ್ಲಿರುವ ಆಸ್ಟ್ರೇಲಿಯಾ ರಾಯಭಾರ ಕಚೇರಿಯ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಭಾರತದ ಭೂಪಟದಿಂದ ಜಮ್ಮು-ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಕೈಬಿಟ್ಟಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಭಾರತೀಯ ಸಮುದಾಯ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ಅಲ್ಲದೇ ಅಸಮರ್ಪಕವಾಗಿ ಪ್ರಕಟಿಸಿರುವ ಭೂಪಟವನ್ನು ಆಸ್ಟ್ರೇಲಿಯಾ ಸರಕಾರದ ವೆಬ್‌ಸೈಟ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿತ್ತು.

ಆಸ್ಟ್ರೇಲಿಯಾದ ವಲಸೆ ಮತ್ತು ಸಿಟಿಜನ್‌ಷಿಪ್ (ಡಿಐಎಸಿ) ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಭಾರತದ ಭೂಪಟ ಸರಿಯಾಗಿಲ್ಲ ಎಂದು ಆರೋಪಿಸಿದೆ.

ಇತ್ತೀಚೆಗಷ್ಟೇ ಚೀನಾ ಸರಕಾರ ಹೊರತಂದ ತನ್ನ ಹೊಸಭೂಪಟದಲ್ಲಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್‌ಚಿನ್ ಪ್ರದೇಶಗಳು ಚೀನಾಕ್ಕೆ ಸೇರಿರುವಂತೆ ಚಿತ್ರಿಸಲಾಗಿತ್ತು. ಜಮ್ಮುಕಾಶ್ಮೀರಕ್ಕೆ ಸೇರಿದ ಅಕ್ಸಾಯ್‌ಚಿನ್ ಪ್ರದೇಶ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯಕ್ಕೆ ಸೇರಿದೆ ಎಂದು ಚೀನಾ ಭೂಪಟದಲ್ಲಿ ಬಿಂಬಿಸಲಾಗಿತ್ತು. ಇದು ಕೂಡ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಇವನ್ನೂ ಓದಿ