ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ ತಿಪ್ಪರಲಾಗ-ಐಎಸ್ಐ ತರಬೇತಿ ಕೊಟ್ಟಿದ್ದು: ಹೆಡ್ಲಿ (David Headley | ISI officers | Mumbai attacks | Pakistan | American,)
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಐಎಸ್ಐ ಪಾತ್ರವೇನೂ ಇಲ್ಲ ಎಂದು ಪಾಕಿಸ್ತಾನ ತಿಪ್ಪರಲಾಗ ಹಾಕುತ್ತಿದ್ದರೆ ಮತ್ತೊಂದೆಡೆ ಮುಂಬೈ ದಾಳಿಯ ಹಿಂದೆ ಐಎಸ್ಐ ನೇರವಾಗಿ ಶಾಮೀಲಾಗಿದೆ ಎಂಬುದನ್ನು ಲಷ್ಕರ್ ಇ ತೊಯ್ಬಾದ ಡೇವಿಡ್ ಹೆಡ್ಲಿ ಬಲವಾಗಿ ಪ್ರತಿಪಾದಿಸತೊಡಗಿದ್ದಾನೆ.

ದೇಶದ್ರೋಹದ ಕೆಲಸಕ್ಕೆ ತಾನು ಐಎಸ್ಐ ಅಧಿಕಾರಿಗಳಿಂದ ಯಾವ ರೀತಿ ತರಬೇತಿ ಪಡೆದಿದ್ದೇನೆ ಎಂಬ ಸ್ಫೋಟಕ ಮಾಹಿತಿಯನ್ನು ಹೆಡ್ಲಿ ಒಂದೊಂದಾಗಿಯೇ ಬಯಲು ಮಾಡುತ್ತಿದ್ದಾನೆ.

ಲಾಹೋರ್‌ನಲ್ಲಿರುವ ಐಎಸ್ಐನ ಎರಡು ಮಹಡಿಯ ಸುರಕ್ಷಿತ ಮನೆಯಲ್ಲಿ ತರಬೇತಿ ನೀಡಿರುವುದಾಗಿ ವಿವರಿಸಿರುವ ಹೆಡ್ಲಿ, ಹಾಗಂತ ಅದೇನು ಜೇಮ್ಸ್ ಬಾಂಡ್ ತರಹ ಅಲ್ಲ, ಆದರೆ ತನ್ನದೇ ಆದ ಸ್ಟೈಲ್‌ನಲ್ಲಿ ಗುರುತಿಸಿಕೊಂಡು ಭಾರತೀಯರ ವಿಶ್ವಾಸ ಹೇಗೆ ಗಳಿಸುವುದು ಎಂಬುದನ್ನೂ ಸಹ ಹೇಳಿಕೊಟ್ಟಿದ್ದರಂತೆ!

ಹೆಡ್ಲಿ ಪಾಕಿಸ್ತಾನಿ-ಅಮೆರಿಕನ್ ಮೂಲದ ವ್ಯಕ್ತಿ, ಈತ ಲಷ್ಕರ್ ಇ ತೊಯ್ಬಾ ಸಂಘಟನೆಯ ಮೂಲಕ ಮುಂಬೈ ಭಯೋತ್ಪಾದನಾ ದಾಳಿ ಮಾಡುವ ಬಗ್ಗೆ ತರಬೇತಿ ಪಡೆದಿದ್ದ. ಆದರೆ ಐಎಸ್ಐನ ಮೇಜರ್ ಇಕ್ಬಾಲ್ ಆ ತರಬೇತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದನಂತೆ. ನಂತರ ಇಕ್ಬಾಲ್‌ ಆತನಿಗೆ ಸೂಕ್ತ ತರಬೇತಿ ನೀಡಿದ್ದು, ಇದರಲ್ಲಿ ಐಎಸ್ಐ‌ನ ನಾನ್-ಕಮೀಷನ್ಡ್ ಆಫೀಸರ್ (ಎನ್‌ಸಿಓ)ಗಳು ಕೂಡ ಭಾಗಿಯಾಗಿರುವುದಾಗಿ ವಿವರಿಸಿದ್ದಾನೆ.
ಇವನ್ನೂ ಓದಿ