.4m | ಸುಳ್ಳು ಕೇಸು: 18 ವರ್ಷ ಜೈಲಿಗೆ 14 ಲಕ್ಷ ಡಾಲರ್ ಪರಿಹಾರ
ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸುಳ್ಳು ಕೇಸು: 18 ವರ್ಷ ಜೈಲಿಗೆ 14 ಲಕ್ಷ ಡಾಲರ್ ಪರಿಹಾರ (Wrongly jailed | 18 years | US man gets | $1.4m)
ಕೊಲೆ ಪ್ರಕರಣದಲ್ಲಿ ಭಾಗಿಯಾಗದಿದ್ದರೂ ಸುಳ್ಳು ಆರೋಪದ ಮೇಲೆ 18 ವರ್ಷ ಜೈಲು ಶಿಕ್ಷೆ ಅನುಭವಿಸಿದ ಅಮೆರಿಕ ವ್ಯಕ್ತಿಯೊಬ್ಬನಿಗೆ 14 ಲಕ್ಷ ಡಾಲರ್ ಪರಿಹಾರ ನೀಡಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

1992ರಲ್ಲಿ ವೃದ್ಧೆ ಹಾಗೂ 5 ಮಕ್ಕಳ ಕೊಲೆಗೆ ಸಂಬಂಧಿಸಿದಂತೆ ರಾಬರ್ಟ್‌ ಎರ್ಲ್‌ ಕಾರ್ಟರ್ ಎಂಬಾತನಿಗೆ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಂಟನಿ ಗ್ರೇವ್ಸ್‌ ವಿರುದ್ಧವೂ ಪ್ರಕರಣ ದಾಖಲಾಗಿ, ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

ಆದರೆ 1998ರಲ್ಲಿ ಮಾರಣಾಂತಿಕ ಇಂಜೆಕ್ಷನ್ ಚುಚ್ಚುವ ಮುನ್ನ ರಾಬರ್ಟ್ ಕಾರ್ಟರ್, ಈ ಘಟನೆಯಲ್ಲಿ ಗ್ರೇವ್ಸ್‌ನ ಯಾವುದೇ ಪಾತ್ರವಿಲ್ಲ ಎಂಬ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಅದಾಗಲೇ ಹನ್ನೆರಡು ವರ್ಷ ಜೈಲಿನಲ್ಲಿ ಕಳೆದಿದ್ದ ಆತನ ಮರುವಿಚಾರಣೆಗೆ ಇನ್ನೂ ನಾಲ್ಕು ವರ್ಷ ತಗುಲಿತ್ತು. ಇದೀಗ ಆತನ ಮೇಲಿನ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಶನ್ ವಿಫಲವಾಗಿರುವ ಹಿನ್ನೆಲೆಯಲ್ಲಿ, ತೀರ್ಪು ಹೊರಬಿದ್ದಿದ್ದು, ಆತನಿಗೆ 14 ಲಕ್ಷ ಡಾಲರ್ ಪರಿಹಾರ ಘೋಷಿಸಲಾಗಿದೆ.

ತನಗೆ ನೀಡಿರುವ ಪರಿಹಾರಕ್ಕಾಗಿ ಕೃತಜ್ಞತೆ ಸಲ್ಲಿಸಿರುವ ಗ್ರೇವ್ಸ್‌, ಈ ಹಣದಿಂದ ತಾನು ಜೈಲಿನಲ್ಲಿ ಕಳೆದ ಸಮಯವನ್ನು ಮರಳಿ ತರಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾನೆ.
ಇವನ್ನೂ ಓದಿ