ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಆಸ್ಟ್ರೇಲಿಯಾ: ಹೆತ್ತ ಮಕ್ಕಳಿಬ್ಬರನ್ನ ಹರಾಜಿಗಿಟ್ಟ ತಾಯಿ! (Australian mom | Quizzed | kids on eBay | Geelong)
ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಇಂಟರ್‌ನೆಟ್‌ನಲ್ಲಿ ಮಾರಾಟಕ್ಕಿಟ್ಟಿದ್ದಳು. ಈ ಕುರಿತು ತನಿಖೆ ನಡೆಸಲು ಹೋದ ಅಧಿಕಾರಿಗಳಿಗೆ ಆಕೆ ತಾನು ಜೋಕ್‌ ಮಾಡಿದ್ದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಗೀಲಾಂಗ್‌ ನಗರದ ದಕ್ಷಿಣ ಭಾಗದ ಮಹಿಳೆಯೊಬ್ಬಳು ಕಳೆದ ವಾರ ಹತ್ತು ವರ್ಷದೊಳಗಿನ ಒಂದು ಗಂಡು ಹಾಗೂ ಹೆಣ್ಣು ಮಗುವನ್ನು ಇಂಟರ್‌ನೆಟ್‌ನಲ್ಲಿ ಮಾರಾಟಕ್ಕಿಟ್ಟಿದ್ದಳು. ಇಬ್ಬರು ಮಕ್ಕಳ ಫೋಟೋಗಳನ್ನೂ ಇ ಬೇ ಹರಾಜು ನೆಟ್‌ನಲ್ಲಿ ಪ್ರಕಟಿಸಿದ್ದಳು.

'ಈ ಜಾಹೀರಾತನ್ನು ನೋಡಿದ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಮಾರಾಟಕ್ಕಿಟ್ಟಿದ್ದ ಮಹಿಳೆಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಆಕೆ ಇದೊಂದು ಜೋಕ್‌ ಎಂದು ಹೇಳಿದ್ದಾಳೆ ' ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆಯ ವಿರುದ್ಧ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಈ ರೀತಿಯ ವರ್ತನೆಗಳು ಪೊಲೀಸರ ಎದೆಗುಂದಿಸಿವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.
ಇವನ್ನೂ ಓದಿ